ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಣ್ಣ ಬೆಂಬಲಿಗರಿಂದ ಶಿಕ್ಷಕರಿಗೆ ಬೆಳ್ಳಿ ಗಿಫ್ಟ್: ಆರೋಪ

Published 13 ಫೆಬ್ರುವರಿ 2024, 4:49 IST
Last Updated 13 ಫೆಬ್ರುವರಿ 2024, 4:49 IST
ಅಕ್ಷರ ಗಾತ್ರ

ಹಾರೋಹಳ್ಳಿ: ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರ ಕಡೆಯವರು ಮತದಾರರಿಗೆ ಬೆಳ್ಳಿ ಬಟ್ಟಲು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತಾಲ್ಲೂಕಿನ ಮರಳವಾಡಿ ಹೋಬಳಿ ಸೇರಿದಂತೆ ಕೆಲ ಗ್ರಾಮಗಳ ಮತದಾರ ಶಿಕ್ಷಕರನ್ನು ಭೇಟಿ ಮಾಡಿರುವ ಪುಟ್ಟಣ್ಣ ಅವರ ಬೆಂಬಲಿರು, ಮತದಾರರಿಗೆ ಬೆಳ್ಳಿ ಬಟ್ಟಲು ಹಾಗೂ ಇತರ ಗಿಫ್ಟ್ ಆಮಿಷವೊಡ್ಡಿದ್ದಾರೆ ಎಂದು ತಾಲ್ಲೂಕಿನ ಜೆಡಿಎಸ್ ಮುಖಂಡ ಶೇಷಾದ್ರಿ ರಾಮು ಆರೋಪ ಮಾಡಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಸಹ ಬಟ್ಟಲುಗಳ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಮತದಾರರಾಗಿರುವ ಶಿಕ್ಷಕರು ಪ್ರೌಢ ಮತದಾರರು. ಉಳಿದೆಲ್ಲಾ ಚುನಾವಣೆಗಳಿಂತ ಈ ಚುನಾವಣೆಯಲ್ಲಿ ಯಾವುದೇ ಆಮಿಷಗಳು ನಡೆಯುವುದಿಲ್ಲ ಎಂದೇ ಜನ ನಂಬಿದ್ದಾರೆ. ಹೀಗಿದ್ದರೂ, ಪುಟ್ಟಣ್ಣ ಅವರ ಕಡೆಯವರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಮಿಷವೊಡ್ಡುವ ಅಡ್ಡದಾರಿ ಹಿಡಿದಿದ್ದಾರೆ. ಈ ಕುರಿತು, ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT