ರಾಮನಗರ: ನಗರದ ಪೌರ ಕಾರ್ಮಿಕರಿಗೆ ಸ್ಟ್ಯಾಂಡ್ ಅಪ್ ಇಂಡಿಯಾ ಫೌಂಡೇಷನ್ ಮತ್ತು ವಿಷನ್ ಸ್ಪ್ರಿಂಗ್ ವತಿಯಿಂದ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸಹಕಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆ ಶಿಬಿರ ಜರುಗಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ನಗರದ ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಇಂತಹ ಶಿಬಿರಗಳು ಅವಶ್ಯಕ. ನಗರದ ಆರೋಗ್ಯ ಕಾಪಾಡುವ ಅವರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

‘ಪೌರ ಕಾರ್ಮಿಕರ ಕರ್ತವ್ಯಕ್ಕೆ ಮತ್ತು ಆರೋಗ್ಯಕ್ಕೆ ಪೂರಕವಾಗಿ ನಗರಸಭೆ ಕಾರ್ಯಕ್ರಮಗಳನ್ನು ರೂಪಿಸಿದೆ. ಮನೆ ರಿಪೇರಿ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿದೆ. ಈ ಸಲದ ಬಜೆಟ್ನಲ್ಲೂ ಅವರ ಬೇಡಿಕೆಗಳನ್ನು ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.

ವಿಷನ್ ಸ್ಪ್ರಿಂಗ್ ಸಂಸ್ಥೆಯ ಡಾ. ಅವಿನಾಶ್ ಮಾತನಾಡಿ, ‘ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದವರು ತಮ್ಮ ಕಣ್ಣುಗಳ ಬಗ್ಗೆ ಕಾಳಜಿ ಮಾಡುವುದಿಲ್ಲ. ನಮ್ಮ ಸಂಸ್ಥೆಯು ಇವರನ್ನು ಕೇಂದ್ರಿಕರಿಸಿ ನೇತ್ರ ತಪಾಸಣೆ ಶಿಬಿರ ಆಯೋಜಿಸಿ, ಕನ್ನಡಕಗಳನ್ನು ವಿತರಿಸುತ್ತಾ ಬರುತ್ತಿದೆ’ ಎಂದರು.

ನಗರಸಭೆ ಸದಸ್ಯೆ ಪವಿತ್ರ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು, ವಿಷನ್ ಸ್ಪ್ರಿಂಗ್ನ ಡಾ. ಅಲ್ತಾಫ್, ಡಾ. ಪ್ರಕಾಶ್, ಫೌಂಡೇಷನ್ನ ಭುವನ್, ಪ್ರೀತಮ್, ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು, ಜಿಲ್ಲಾಧ್ಯಕ್ಷ ಬಿ. ವೆಂಕಟೇಶ್, ಶಾಖಾಧ್ಯಕ್ಷ ದೇವೇಂದ್ರ, ನಗರಸಭೆ ಎಇಇ ಸುಬ್ರಮಣ್ಯ, ಗ್ಲೋಬಲ್ ಟ್ರಾವೆಲ್ ಚಾರಿಯೆಟ್ನ ರೋಹಿತ್, ಸಾಗರ್, ಮುಖಂಡರಾದ ಚಿಕ್ಕರಂಗಪ್ಪ, ಅಂಕನಹಳ್ಳಿ ಚನ್ನಂಕೇಗೌಡ, ಡಾ. ಸುರೇಶ್ ಗೌತಮ್, ಕೂಡ್ಲೂರು ರವಿಕುಮಾರ್ ಇದ್ದರು. ನೂರಕ್ಕೂ ಹೆಚ್ಚು ಮಂದಿಗೆ ನೇತ್ರ ತಪಾಸಣೆ ಮಾಡಿ ಕನ್ನಡಕ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.