ಶನಿವಾರ, ಜುಲೈ 31, 2021
27 °C
ಮಾಗಡಿ:ಕಾಮಗಾರಿಗೆ ಶಾಸಕ ಎ.ಮಂಜುನಾಥ ಶಂಕುಸ್ಥಾಪನೆ

ರಾಮನಗರ: ಪೈಪ್‌ನಲ್ಲಿ ಮನೆಗಳಿಗೆ ಅಡುಗೆ ಅನಿಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದ ಮನೆಗಳಿಗೆ ಗ್ಯಾಸ್ ಪೈಪ್ ಅಳವಡಿಕೆಯ ಮೂಲಕ ಅಡುಗೆ ಅನಿಲ ಸರಬರಾಜು ಮಾಡಲಾಗುವುದು ಎಂದು ಶಾಸಕ ಎ. ಮಂಜುನಾಥ ತಿಳಿಸಿದರು.

ತಿರುಮಲೆಯ 5ನೇ ವಾರ್ಡ್‌ನಲ್ಲಿ ಗ್ಯಾಸ್ ಪೈಪ್ ಅಳವಡಿಕೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನ್ಯಾಚುರಲ್‌ ಗ್ಯಾಸ್‌ ಟಿ.ಎಂ. ಗೇಲ್‌ ಮತ್ತು ಬಿಪಿಸಿಎಲ್‌ನ ಪಾಲುದಾರಿಕೆಯಲ್ಲಿ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ಪಟ್ಟಣದ ಎಲ್ಲ 23 ವಾರ್ಡ್‌ ಮನೆಗಳೂ ಪೈಪ್‌ ಮೂಲಕ ಅಡುಗೆ ಅನಿಲ ಸರಬರಾಜು ಮಾಡಲಾಗುತ್ತಿದೆ. ಪೈಪ್ ಮೂಲಕ ಮನೆಗಳಿಗೆ ಗ್ಯಾಸ್ ಸರಬರಾಜು ಮಾಡುವುದರಿಂದ ಸಿಲಿಂಡರ್ ಸ್ಫೋಟ ಸೇರಿದಂತೆ ಯಾವುದೇ ಅವಘಡ ಸಂಭವಿಸುವುದಿಲ್ಲ. ಬುಕ್ ಮಾಡುವ ಅವಶ್ಯಕತೆ ಇರುವುದಿಲ್ಲ. ನಿರಂತರವಾಗಿ ಗ್ಯಾಸ್ ಸರಬರಾಜು ಇರುತ್ತದೆ ಎಂದು ತಿಳಿಸಿದರು. 

ಜನರು ಸದ್ಯ ಖರೀದಿ ಮಾಡುತ್ತಿರುವ ‌ದರಕಿಂತ ಕಡಿಮೆ ದರ ಇರಲಿದೆ. ಪೈಪ್ ಮೂಲಕ ಗ್ಯಾಸ್ ಸಂಪರ್ಕಕ್ಕೆ  ಮನೆಗೆ ₹ 6,000 ಠೇವಣಿ ಕಟ್ಟಬೇಕು. ಇದಿಷ್ಟೂ ಹಣವನ್ನು ಒಂದೇ ಬಾರಿ ಕಟ್ಟಬೇಕಾಗಿಲ್ಲ. ಆರು ಸಾವಿರ ಹಣ ಮುಗಿದ ನಂತರ ಬಳಸಿದಷ್ಟು ಗ್ಯಾಸ್‌ ಹಣ ಪಾವತಿಸ ಬೇಕಾಗುತ್ತದೆ ಎಂದು ತಿಳಿಸಿದರು. 

ಜೆಡಿಎಸ್‌ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಕಾಂತರಾಜು, ಕೆ.ವಿ. ಬಾಲರಘು, ನ್ಯಾಚುರಲ್ ಗ್ಯಾಸ್ ಏಜೆನ್ಸಿಯ ಅಧಿಕಾರಿಗಳಾದ ಅಜಯ್ ನಾಯರ್, ವಿಷ್ಣು ದಾಸ್, ಜಿ. ಮಂಜುನಾಥ್, ಜೆಡಿಎಸ್ ಮುಖಂಡರಾದ ಜುಟ್ಟನಹಳ್ಳಿ ಜಯರಾಮ್‌, ಎನ್ಇಎಸ್‌ ಜಯರಾಮ್‌ ಕುಂಚಿಟಿಗ, ಭೈರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು