ರಾಮನಗರ: ನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ಕರಗ ಮಹೋತ್ಸವ ಪ್ರಯುಕ್ತ ಮಂಡಿಪೇಟೆ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಸಾಂಸ್ಕತಿಕ ಕಾರ್ಯಕ್ರಮ ಹಾಗೂ ಭಜನೆ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜೊತೆಗೆ, ಸಾಂಸ್ಕೃತಿಕವಾಗಿ ಸಮಾಜವನ್ನು ಒಗ್ಗೂಡಿಸುತ್ತವೆ. ದೇವತಾ ಕಾರ್ಯಗಳು ಮನುಷ್ಯನ ಮೇಲೆ ಸಾಕಷ್ಟು ಪರಿಣಾಮ ಉಂಟುಮಾಡುತ್ತವೆ. ಇದರಿಂದ ಯುವಕರಲ್ಲಿ ಜಾಗೃತಿ ಹಾಗೂ ಒಗ್ಗಟ್ಟು ಮೂಡಿಸಲಿದೆ’ ಎಂದರು.

‘ರಾಮನಗರದಲ್ಲಿ ನಡೆಯುವ ಶಕ್ತಿ ದೇವತೆಗಳ ಕರಗ ಮಹೋತ್ಸವವ ನಗರದ ಅಸ್ಮಿತೆಯಾಗಿದೆ. ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಈಗಾಗಲೇ ನಗರದ ರಸ್ತೆಗಳನ್ನು ದುರಸ್ತಿ ಜೊತೆಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಲಕ್ಷಾಂತರ ಜನ ಸೇರುವ ಕರಗಕ್ಕೆ ಅಡಚಣೆಯಾಗದಂತೆ ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

ನಗರಸಭೆಯ 14ನೇ ವಾರ್ಡ್ ನಗರಸಭೆ ಸದಸ್ಯ ನಿಜಾಮುದ್ದೀನ್ ಷರೀಫ್ , ‘ರಾಮನಗರದಲ್ಲಿ ನಡೆಯುವ ಕರಗವು ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ಅದೇ ಕಾರಣಕ್ಕೆ ಇಲ್ಲಿ ಜಾತಿ ಮತ್ತು ಧರ್ಮಗಳನ್ನು ಮೀರಿ ಎಲ್ಲರೂ ಒಟ್ಟಾಗಿ ಕರಗ ಆಚರಿಸುತ್ತಾರೆ’ ಎಂದರು.

ನಗರದ ಶ್ರೀ ಲಕ್ಷ್ಮೀ ಭಜನಾ ಮಂಡಳಿ ಸದಸ್ಯರು ದೇವಾಲಯದಲ್ಲಿ ಭಜನೆ ನಡೆಸಿಕೊಟ್ಟರು. ರೇಣುಕಾಪ್ರಸಾದ್ ನೇತೃತ್ವದ ಎಬಿಸಿಡಿ ನೃತ್ಯ ತಂಡ ಸಾಂಸ್ಕತಿಕ ಕಾರ್ಯಕ್ರಮ ನಡೆಸಿಕೊಟ್ಟಿತು. ಶ್ರೀನಿವಾಸ ಕಲ್ಯಾಣ ಕಥಾ ಪ್ರಸಂಗದ ನೃತ್ಯ ನಾಟಕ ಗಮನ ಸಳೆಯಿತು. ಕರಗಧಾರಕ ಯೋಗೇಶ್ ಹಾಗೂ ದೇವಿಪ್ರಸಾದ್ ಸಿಂಗ್ ಅವರನ್ನು ಸನ್ಮಾನಿಸಲಾಯಿತು. ಮಂಡಿಪೇಟೆ ಗೆಳೆಯರ ಬಳಗದ ಪದಾಧಿಕಾರಿಗಳಾದ ರವಿಕಿರಣ್, ದೀಪಕ್, ಮಧುಸೂಧನ್, ಮಣಿಕಂಠ, ರಾಗಿ ಮಿಷಿನ್ ದೀಪು, ಮಂಜುನಾಥ್, ತರುಣ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.