ರಾಮನಗರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷರಾಗಿ ಎಸ್. ಸುರೇಶ್ (ದೊಡ್ಡಿ ಸೂರಿ) ಮತ್ತು ಉಪಾಧ್ಯಕ್ಷರಾಗಿ ಎಚ್.ಎನ್. ಶ್ರೀನಿವಾಸಮೂರ್ತಿ (ರಾಜು) ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲೂ ಎಸ್. ಸುರೇಶ್, ಎಚ್.ಎನ್. ಶ್ರೀನಿವಾಸಮೂರ್ತಿ, ಕೆ. ಚಂದ್ರಯ್ಯ, ಅಂಜನಾಪುರ ವಾಸು, ಬಿ.ಎನ್. ಶಂಕರ್, ಕೆ. ಶಿವಪ್ರಕಾಶ್, ಎ. ಶ್ರೀನಿವಾಸ್, ನವೀನಕುಮಾರಿ, ಎಸ್. ನಾಗರಾಜು, ಸುಧಾರಾಣಿ, ಮಹದೇವಯ್ಯ ಹಾಗೂ ಬಿ. ನರಸಿಂಹಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದರು.

ಅದರ ಬೆನ್ನಲ್ಲೇ ಸಂಘದ ಕಚೇರಿಯಲ್ಲಿ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಇವರಿಬ್ಬರನ್ನು ಬಿಟ್ಟರೆ ಬೇರಾರು ನಾಮಪತ್ರ ಸಲ್ಲಿಸಿರಲಿಲ್ಲ. ಹಾಗಾಗಿ, ಇಬ್ಬರೂ ವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಅವರು ಘೋಷಿಸಿದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ನಷ್ಟದಲ್ಲಿರುವ ಸಂಘದಲ್ಲಿ ರಾಜಕೀಯ ನುಸುಳಬಾರದು. ಹಾಗಾಗಿ, ಸಂಘಕ್ಕೆ ಚುನಾವಣೆ ನಡೆಸದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರೊಂದಿಗೆ ಚರ್ಚಿಸಿ ಒಮ್ಮತ್ತದಿಂದ ನಿರ್ದೇಶಕರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ದುಡಿದು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು, ‘ಸಂಘವು 13 ವರ್ಷಗಳಿಂದ ನಷ್ಟದಲ್ಲಿದೆ. ಸಂಘಕ್ಕೆ ಒಳ್ಳೆಯ ಕಟ್ಟಡವಿದ್ದರೂ ಸವಲತ್ತುಗಳು ಸಿಗುತ್ತಿಲ್ಲ. ತಾಲ್ಲೂಕಿನ 21 ಸಂಘಗಳಿಗೆ ಪಡಿತರ ಈಗ ಆಹಾರ ಇಲಾಖೆಯ ಕೆಎಸ್ಎಫ್ಸಿ ಗೋದಾಮಿನಿಂದ ಸರಬರಾಜಾಗುತ್ತಿದೆ. ಸಂಘದ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸಂಘದಿಂದಲೇ ಪಡಿತರ ಸರಬರಾಜಗುವಂತೆ ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ್, ನಿರ್ದೇಶಕರಾದ ಅಶೋಕ ತಮ್ಮಾಜಿ ಸೇರಿದಂತೆ ಹಲವರು ಮನವಿ ಮಾಡಿದ್ದೇವೆ’ ಎಂದರು.

ನೂತನ ಅಧ್ಯಕ್ಷ ಸುರೇಶ್ ಮಾತನಾಡಿ, ‘ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸಂಘವನ್ನು ಅಭಿವೃದ್ಧಿ ಮತ್ತು ಲಾಭದ ಪಥದಲ್ಲಿ ಕೊಂಡೊಯ್ಯಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ಪಿ. ಅಶ್ವಥ್, ವಿ.ಎಚ್. ರಾಜು, ರಾಮಕೃಷ್ಣಯ್ಯ, ದೊರೆಸ್ವಾಮಿ, ಲಕ್ಷ್ಮಿಕಾಂತ್, ನರಸಿಂಹ, ಶಿವಕುಮಾರಸ್ವಾಮಿ, ರವಿ, ಬೋರೇಗೌಡ, ಜೈಕುಮಾರ್, ಮಂಚೇಗೌಡ, ದೊರೆಸ್ವಾಮಿ, ಸಂಘದ ಕಾರ್ಯದರ್ಶಿ ಜನಾರ್ಧನ್ಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವಥ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.