ರಾಮನಗರ: ತಾಲ್ಲೂಕಿನ ಕೊಂಕಣಿದೊಡ್ಡಿ ಸಮೀಪ ಪೈಪ್ ಲೈನ್ ಒಳಗೆ ಸಿಲುಕಿದ್ದ ರೈತನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಭಾನುವಾರ ರಕ್ಷಣೆ ಮಾಡಿದರು.

ಕೊಂಕಣಿದೊಡ್ಡಿ ನಿವಾಸಿ ರಾಜಣ್ಣ (50) ರಕ್ಷಣೆಗೆ ಒಳಗಾದವರು. ಇವರ ಹೊಲದ ಮಧ್ಯೆ ಬೆಂಗಳೂರು-ಮೈಸೂರು ಹೆದ್ದಾರಿಯ ಬೈಪಾಸ್ ರಸ್ತೆ ಹಾದುಹೋಗಿದೆ. ಆ ರಸ್ತೆ ಮಧ್ಯೆ ಹಳ್ಳದ ನೀರು ಹರಿದು ಹೋಗಲು ಬೃಹತ್ತಾದ ಪೈಪ್ ಗಳನ್ನು ಹಾಕಲಾಗಿದೆ. ಹೊಲದ ಒಂದು ಭಾಗದಲ್ಲಿ ಕೊಳವೆ ಬಾವಿ ಕೊರೆಯಿಸಿದ್ದು, ಅದರ ಪೈಪ್ ಅನ್ನು ರಸ್ತೆ ಒಳಗಿನ ಪೈಪ್ ಲೈನ್ ಮೂಲಕ ಹೊಲದ ಮತ್ತೊಂದು ಬದಿಗೆ ಕೊಂಡೊಯ್ಯಲು ರಾಜಣ್ಣ ಮುಂದಾಗಿದ್ದರು. ಇದಕ್ಕಾಗಿ ರಸ್ತೆಯ ಪೈಪ್ ಲೈನ್ ಒಳಗೆ ತೂರಿ ಮುಂದೆ ಸಾಗಿದ್ದರು. ಈ ಮಧ್ಯೆ ಪೈಪ್ ಒಳಗೆ ಸಿಲುಕಿಕೊಂಡಿದ್ದರು.

ಘಟನೆ ನಡೆದ ಸಂದರ್ಭ ರಾಜಣ್ಣ ಜೊತೆಗೆ ಅವರ ಪತ್ನಿ ಹಾಗೂ ಮಗ ಇದ್ದರು. ಅವರು ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಜೆಸಿಬಿ ಯಂತ್ರಗಳ ಸಹಾಯದಿಂದ ರಸ್ತೆ ಅಗೆದು ರೈತನನ್ನು ರಕ್ಷಣೆ ಮಾಡಿದರು.

ಸದ್ಯ ರೈತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆರೋಗ್ಯದಿಂದ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.