ಮಳೆ ಅಬ್ಬರಕ್ಕೆ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆ ಜಲಾವೃತಗೊಂಡಿತ್ತು
ಮಳೆಯಿಂದಾಗಿ ರಾಮನಗರದ ಕೊತ್ತಿಪುರದ ಮನೆಯೊಂದರ ಹೆಂಚುಗಳು ಹಾರಿ ಹೋಗಿವೆ
ಮಳೆಯಿಂದಾಗಿರ ರಾಮನಗರದ ರಾಜಕಾಲುವೆಯಲ್ಲಿ ಕಟ್ಟಿಕೊಂಡಿರುವ ಕಸದ ರಾಶಿ

ತಾಲ್ಲೂಕಿನಲ್ಲಿ 14 ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾನಿಗೊಂಡಿರುವ ಮನೆಗಳ ಮಾಲೀಕರಿಗೆ ಒಟ್ಟು ₹5.16 ಲಕ್ಷ ಪರಿಹಾರ ನೀಡಲಾಗಿದೆ
– ತೇಜಸ್ವಿನಿ ತಹಶೀಲ್ದಾರ್ ರಾಮನಗರ ತಾಲ್ಲೂಕುರಾಮನಗರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಮಳೆಯಿಂದ ಹಾನಿಗೊಂಡಿರುವ ಯಾರಬ್ ನಗರದ ಸೇತುವೆ ವೀಕ್ಷಿಸಿದರು. ಉಪಾಧ್ಯಕ್ಷೆ ಆಯಿಷಾ ಬಾನು ಸದಸ್ಯರು ಹಾಗೂ ಅಧಿಕಾರಿಗಳು ಇದ್ದಾರೆ
ಅಧ್ಯಕ್ಷರ ನಗರ ಸಂಚಾರ
ರಾಮನಗರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಬೆಳಿಗ್ಗೆ ಅಧಿಕಾರಿಗಳೊಂದಿಗೆ ನಗರ ಸಂಚಾರ ಮಾಡಿ ಮಳೆ ಹಾನಿಯಾಗಿರುವ ಪ್ರದೇಶಗಳನ್ನು ವೀಕ್ಷಿಸಿದರು. ಯಾರಬ್ ನಗರ ಮಂಜುನಾಥ ನಗರ ಜಿಯಾವುಲ್ಲಾ ಬ್ಲಾಕ್ ಸೀರೆಹಳ್ಳ ಕಾಲುವೆ ಸೇರಿದಂತೆ ವಿವಿಧ ಪ್ರದೇಶಳಿಗೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯರು ಮಳೆಯಿಂದಾದ ಸಮಸ್ಯೆಗಳನ್ನು ತೋಡಿಕೊಂಡರು. ಸೀರೆಹಳ್ಳದ ಹರಿವಿನ ರಭಸಕ್ಕೆ ಯಾರಬ್ ನಗರದಲ್ಲಿ ಸೇತುವೆ ಹಾನಿಗೊಂಡಿದ್ದು ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಉಪಾಧ್ಯಕ್ಷೆ ಆಯಿಷಾ ಬಾನು ಸೇರಿದಂತೆ ಕೆಲ ಸದಸ್ಯರು ಜೊತೆಗಿದ್ದರು. ಭೇಟಿ ಬಳಿಕ ನಗರಸಭೆಯಲ್ಲಿ ಸಭೆ ನಡೆಸಿದ ಶಶಿ ಮಳೆ ಅನಾಹುತವಾದಾಗ ಕೂಡಲೇ ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ದರಾಗಿರಬೇಕು. ಮರಗಳು ಬಿದ್ದಾಗ ತಕ್ಷಣ ತೆರವುಗೊಳಿಸಬೇಕು. ಮಳೆ ಹಾನಿ ಕುರಿತು ಸಾರ್ವಜನಿಕರಿಂದ ದೂರು ಬಂದಾಕ್ಷಣ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಳ ಸೇತುವೆ ಜಲಾವೃತ
ಚನ್ನಪಟ್ಟಣ: ತಾಲ್ಲೂಕಿನ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಿಟ್ಟಮಾರನಹಳ್ಳಿ ಕ್ರಾಸ್ ಕೆಳ ಸೇತುವೆ ಮಳೆಯಿಂದಾಗಿ ಜಲಾವೃತಗೊಂಡಿತ್ತು. ಸೊಂಟದವರೆಗೆ ನೀರು ಬಂದಿದ್ದರಿದ ಗ್ರಾಮದ ಸಂಪರ್ಕ ಕೆಲ ಹೊತ್ತು ಕಡಿತಗೊಂಡಿತು. ಕೆಲ ವಾಹನಗಳ ಸವಾರರು ನೀರಿನಲ್ಲೇ ಸೇತುವೆ ದಾಟಿದರು. ಹೆದ್ದಾರಿ ನಿರ್ಮಾಣವಾದಾಗಿನಿಂದಲೂ ಮಳೆ ಬಂದಾಗ ಕೆಳ ಸೇತುವೆ ಜಲಾವೃತವಾಗುತ್ತದೇ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಮಿಕರು ಬಂದು ನೀರು ಹರಿದು ಹೋಗುವಂತೆ ಮಾಡಿದರು ಎಂದು ಸ್ಥಳೀಯರು ತಿಳಿಸಿದರು.