‘ಲೇಯ್, ಒಂದೊಂದಾಗಿ ನೊಬೆಲ್ ಪ್ರಶಸ್ತಿಗಳು ಬತ್ತಾ ಅವೆ ಕಣ್ರಲಾ’ ಎಂದ ಗುದ್ಲಿಂಗ!

‘ವೂ ಕಣ್ಲಾ’ ಅಂತ ಹೂಗುಟ್ಟಿದ ಮಾಲಿಂಗ.

‘ನೊಬೆಲ್ ಪ್ರಶಸ್ತಿದು ಬಿಡ್ರೋ... ಇದ್ರ ಜೊತೆಗೇ ಪ್ರತಿವರ್ಷ ಇಗ್ನೊಬೆಲ್ ಪ್ರಶಸ್ತಿ ಅಂತ ಕೊಡ್ತಾರೆ. ಅದು ತುಂಬಾ ಸ್ವಾರಸ್ಯಕರವಾದ್ದು’ ಎಂದ ಪರ್ಮೇಶಿ.

‘ಇಗ್ನೊಬೆಲ್ಲಾ? ಅಂಗಂದ್ರೆ ಏನ್ಲಾ?’

‘ಎಡವಟ್ಟು ಸಾಧನೆಗಳಿಗೆ ಇಗ್ನೊಬೆಲ್ ಪ್ರಶಸ್ತಿ ಕೊಡ್ತಾರೆ. ಎಣ್ಣೆ ಹಾಕುದ್ರೆ ಫಾರಿನ್ ಲ್ಯಾಂಗ್ವೇಜ್ ಬಳಬಳ ಸಲೀಸಾಗಿ ಬತ್ತದಾ? ಹಸುಗಳ ಮೇಲೆ ಜೀಬ್ರಾಗಿರೊ ತರ ಗೆರೆಗಳನ್ನ ಪೈಂಟ್ ಮಾಡುದ್ರೆ ಸೊಳ್ಳೆ ಕಡಿಯಲ್ವಾ? ಆಫ್ರಿಕಾದ ಹಲ್ಲಿಗಳು ಸ್ಪೆಷಲ್ ಪಿಜ್ಜಾ ಇಷ್ಟಪಡುತ್ವಾ? ಇಂಗೆಲ್ಲಾ ಸಂಶೋಧನೆ ಮಾಡವ್ರಂತೆ ಕಣ್ರಲಾ’.

‘ಮೊದಲ್ನೆದಂತೂ ನಮ್ ಕುಡುಕರೇ ಸಂಶೋಧನೆ ಮಾಡವ್ರೆ. ನೈಂಟಿ ತಗಂತಿದ್ದಂಗೆ ಇಂಗ್ಲಿಷ್ ಯದ್ವಾತದ್ವಾ ಬುರ್ ಬುರ್ ನೊರೆ ತರ ನುಗ್ಗಿ ಬರಕಿಲ್ವಾ?’.

‘ನಮ್ಮೋರು ವಿಕಾಸ್ ಕುಮಾರ್ ಮತ್ತು ಸಾರ್ಥಕ್ ಮಿಠ್ಠಲ್ ಅನ್ನೋರಿಗೂ ಇಗ್ನೊಬೆಲ್ ಸಿಕ್ಕಿದೆ. ಶೂ, ಸಾಕ್ಸ್ ವಾಸನೆ ಕಮ್ಮಿ ಮಾಡೋಕೆ ಸ್ಪೆಷಲ್ ರ್ಯಾಕ್ ಡಿಸೈನ್ ಮಾಡಿದಾರಂತೆ...’

‘ರಸ್ತೆ ಗುಂಡಿ ಬಗ್ಗೆ ಸಂಶೋಧನೆ ಮಾಡಿ ರಸ್ತೇಲಿ ಹರಿಯೋ ನೀರಿನ ಒಳಗಿನ ಗುಂಡಿ ಕಾಣೋ ಸ್ಪೆಷಲ್ ಕನ್ನಡಕ, ಗುಂಡಿ ಹಾರ್ಸುದ್ರೂ ಸೊಂಟ ಮುರಿಯದ ಸ್ಪೈನಲ್ ಸ್ಪ್ರಿಂಗ್ ಕಂಡು ಹಿಡುದ್ರೆ ಫಿಸಿಕ್ಸ್ ಇಗ್ನೊಬೆಲ್ ಗ್ಯಾರಂಟಿ’.

‘ಗುಂಡೀನ ನೋಡುದ್ರೂ ಮುಚ್ಚಬಾರದು ಅನ್ನೋ ಸ್ಪೆಷಲ್ ಮೈಂಡ್ಸೆಟ್ ಮೇಲೆ ಥೀಸಿಸ್ ಬರುದ್ರೆ ಸೈಕಾಲಜಿ ಇಗ್ನೊಬೆಲ್ ಗ್ಯಾರಂಟಿ’.

‘ಇಗ್ನೊಬೆಲ್ ಶಾಂತಿ ಎಂಗೆ?’

‘ಯಾರಾರಾ ಗುಂಡಿ ಹಾರಿ ಬಿದ್ದು ಹರೋಹರ ಅಂತಾರಲ್ಲ, ಅವರಿಗೆ ನಮ್ ರಾಜಕೀಯದೋರು ‘ಎಕ್ಸ್’ನಲ್ಲಿ ಓಂ ಶಾಂತಿ ಅಂತ ಹಾಕಲ್ವಾ? ಅದೇ ಇಗ್ನೊಬೆಲ್ ಶಾಂತಿ’ ಎಂದ ಪರ್ಮೇಶಿ. ಎಲ್ಲಾ ‘ಜೈ ಇಗ್ನೊಬೆಲ್’ ಎಂದು ನಕ್ಕರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.