ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ | ₹1 ಲಕ್ಷ ಮೌಲ್ಯದ ವಸ್ತು ಕಳ್ಳತನ: ದೂರು

Published 16 ಮೇ 2024, 14:32 IST
Last Updated 16 ಮೇ 2024, 14:32 IST
ಅಕ್ಷರ ಗಾತ್ರ

ಮಾಗಡಿ (ಕುದೂರು): ‘ತಿಂಗಳ ಹಿಂದಷ್ಟೇ ಅಂಗಡಿಯಲ್ಲಿ ವ್ಯಾಪಾರಕ್ಕೆ ಬಂದಾಗ ಪರಿಚಯವಾಗಿದ್ದ ವ್ಯಕ್ತಿ ನನ್ನ ಪರ್ಸ್‌ನಲ್ಲಿದ್ದ ಮೊಬೈಲ್ ಹಾಗೂ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾನೆ’ ಎಂದು ಬೆಂಗಳೂರು ಉತ್ತರ ತಾಲ್ಲೂಕಿನ ಕಗ್ಗಲಿಪುರ ಸಮೀಪದ ಉತ್ತರಿ ಗ್ರಾಮದ ಮಹಾದೇವಿ ಎಂಬುವರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉಲ್ಲಾಳ ಉಪನಗರದ ರಾಮ್ ಮೋಹನ್ ಎಂಬ ವ್ಯಕ್ತಿಯೊಂದಿಗೆ ಪರಿಚಯ ಸ್ನೇಹವಾದ ನಂತರ ಇಬ್ಬರೂ ಮಾಗಡಿ ಶ್ರೀರಂಗನಾಥ  ದೇವಸ್ಥಾನಕ್ಕೆ ಬಂದಿದ್ದರು. ದೇವಸ್ಥಾನದ ಒಳಗೆ ಪ್ರವೇಶಿಸಲು ಕೈಕಾಲು ತೊಳೆದುಕೊಳ್ಳುವ ಸಮಯದಲ್ಲಿ, ತನ್ನಲ್ಲಿದ್ದ ಪರ್ಸನ್ನು ರಾಮ್ ಮೋಹನ್ ಎಂಬ ವ್ಯಕ್ತಿಗೆ ಇಟ್ಟುಕೊಳ್ಳಲು ಮಹಾದೇವಿ ಕೊಟ್ಟಿದ್ದರು. ಕೈಕಾಲು ತೊಳೆದು ಕೊಂಡ ನಂತರ ಆ ವ್ಯಕ್ತಿ ಅಲ್ಲಿರಲಿಲ್ಲ ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪರ್ಸ್‌ನಲ್ಲಿ ಒಂದು ಮೊಬೈಲ್ ಫೋನ್, 11 ಗ್ರಾಂ ತೂಕದ ಚಿನ್ನದ ಸರ, 5 ಗ್ರಾಂ ತೂಕದ ಚಿನ್ನದ ಉಂಗುರ ಸೇರಿದಂತೆ ಅಂದಾಜು ₹1 ಲಕ್ಷ ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT