ಕುದೂರು: ಧರ್ಮಗ್ರಂಥಗಳ ಅಧ್ಯಯನದಿಂದ ಮಾನವೀಯ ಮೌಲ್ಯ ಪಡೆಯಬಹುದು ಎಂದು ಕಳ್ಳಿಪಾಳ್ಯ ಭಕ್ತ ಮುನೇಶ್ವರ ಮಠದ ಪೀಠಾಧ್ಯಕ್ಷ ರಂಗನಾಥನಂದ ಸ್ವಾಮೀಜಿ ತಿಳಿಸಿದರು.

ಮಾತೃಶ್ರೀ ರೇಣುಕಮ್ಮ ಸಂಸ್ಥೆಯಿಂದ ಆಯೋಜಿಸಿದ್ದ ಮಹಾಭಾರತ ಪರೀಕ್ಷೆ ಕಥಾಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀರಾಮ ಮತ್ತು ಶ್ರೀಕೃಷ್ಣರ ಆದರ್ಶ ಗುಣ ಅಳವಡಿಸಿಕೊಂಡರೆ ಆರೋಗ್ಯಕರ ಸಮಾಜ ಸಾಧ್ಯ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ಎಚ್.ಆರ್.ಮಂಜುನಾಥ್, ಕುದೂರು ಮತ್ತು ತಿಪ್ಪಸಂದ್ರ ಹೋಬಳಿಗಳಲ್ಲಿ 1800ಕ್ಕೂ ಹೆಚ್ಚು ಮಕ್ಕಳು ನೋಂದಾಯಿಸಿರುವ ಮಹಾಭಾರತ ಪರೀಕ್ಷೆ ನಡೆಸಿ, 24 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಒಡಿಶಾ ಅಥವಾ ಮಥುರಾಗೆ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.

ಕಳ್ಳಿಪಾಳ್ಯ ಮತ್ತು ಮಣ್ಣಿಗನಹಳ್ಳಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಹಾಭಾರತ ಪುಸ್ತಕಗಳನ್ನು ನೀಡಲಾಯಿತು. ರಾಮಸ್ವಾಮಿ, ರವೀಶ್, ಆನಂದ್, ಗೋವಿಂದರಾಜು, ವಿನೋದ್ ಕುಮಾರ್, ನಾಗರತ್ನ, ಅಶೋಕ್, ರಂಜಿತ್, ಅಶ್ವಿನಿ ಇದ್ದರು.

ಕುದೂರು : ಧರ್ಮ ಗ್ರಂಥಗಳ ಅಧ್ಯಯನದಿಂದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದು ಕಳ್ಳಿಪಾಳ್ಯ ಭಕ್ತ ಮುನೇಶ್ವರ ಮಠದ ಪೀಠಾಧ್ಯಕ್ಷರಾದ ರಂಗನಾಥನಂದ ಸ್ವಾಮೀಜಿಗಳು ತಿಳಿಸಿದರು.

ತಾಲ್ಲೂಕಿನ ಕಳ್ಳಿಪಾಳ್ಯ ಗ್ರಾಮದಲ್ಲಿ ಮಾತೃಶ್ರೀ ರೇಣುಕಮ್ಮ ಸಂಸ್ಥೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಮಹಾಭಾರತ ಪರೀಕ್ಷೆಯ ಉಚಿತ ಕಥೆ ಪುಸ್ತಕಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಮನುಷ್ಯನ ಜೀವನದಲ್ಲಿ ಕಲಿಯಲೇಬೇಕಾದ ಹಾಗೂ ಓದಲೇಬೇಕಾದ ಎರಡು ಮಹಾಗರಂತಗಳೆಂದರೆ ಭಗವದ್ಗೀತೆ ಹಾಗೂ ರಾಮಾಯಣ ಶ್ರೀರಾಮಚಂದ್ರ ಹಾಗೂ ಶ್ರೀ ಕೃಷ್ಣ ಪರಮಾತ್ಮನ ಆದರ್ಶ ಗುಣಗಳು ಮನುಷ್ಯರಿಗೆ ಬಂದಿದ್ದೆ ಆದರೆ ಆರೋಗ್ಯಕರವಾದ ಸಮಾಜವನ್ನು ನಾವು ಕಾಣಬಹುದಾಗಿದೆ, ರಾಮನ ಮಾತ ಹಾಗೂ ಪಿತೃ ಪ್ರೇಮ ಸೋದರ ವಾತ್ಸಲ್ಯ ಹಾಗೂ ಧರ್ಮಪಾಲನೆ ಇಂದಿಗೂ ಆದರ್ಶಪ್ರಾಯವಾಗಿದೆ ಹಾಗೂ ಶ್ರೀ ಕೃಷ್ಣ ಪರಮಾತ್ಮನ ರಾಜನೀತಿ ಮತ್ತು ಕಷ್ಟದಲ್ಲಿರುವವರ ರಕ್ಷಣೆ ಮಾಡುವ ಕೆಲಸ ಇತರರು ಅಳವಡಿಸಿಕೊಳ್ಳಬೇಕಿದೆ ಹೀಗಾಗಿ ಹಳ್ಳಿಗಳಲ್ಲಿಯೂ ಕೂಡ ರಾಮಾಯಣ ಮತ್ತು ಕುರುಕ್ಷೇತ್ರ ನಾಟಕಗಳನ್ನು ಆಡುತ್ತಾರೆ ಅದರಂತೆ ಒಂದೊಂದು ಪಾತ್ರಗಳು ತಿಳಿಸುವ ಸನ್ನಿವೇಶಗಳನ್ನು ಒಂದೊಂದು ಪಾತ್ರಗಳು ಕಲಿಸುವ ಪ್ರೀತಿಯನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಾತೃಶ್ರೀ ರೇಣುಕಮ್ಮ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಆರ್ ಮಂಜುನಾಥ್ ಮಾತನಾಡಿ, ಮಹಾಭಾರತ ಪರೀಕ್ಷೆಯನ್ನು ಈ ಬಾರಿ ಕುದುರು ಹಾಗೂ ತಿಪ್ಪಸಂದ್ರ ಎರಡು ಹೋಬಳಿ ಗಳಲ್ಲಿ ಆ ಯೋಜನೆ ಮಾಡಿದ್ದೇವೆ 1800ಕ್ಕೂ ಹೆಚ್ಚಿನ ಮಕ್ಕಳು ಪರೀಕ್ಷೆ ಬರೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ತಿಪ್ಪಸಂದ್ರ ಎರಡು ಕಡೆ ರಜಾದಿನಗಳಲ್ಲಿ ಪರೀಕ್ಷಾ ಕೇಂದ್ರವನ್ನು ಮಾಡಿ ಪರೀಕ್ಷೆ ನಡೆಸಿ 24 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಒರಿಸ್ಸಾ ಪುರಿ ಜಗನ್ನಾಥ ಅಥವಾ ಮಥುರ ನಗರಿಗೆ ವಿಮಾನದ ಮೂಲಕ ಪ್ರವಾಸ ಮಾಡಿಸುವ ಕೆಲಸ ಮಾಡಿದ್ದೇವೆ.
ಮಾತೃಶ್ರೀ ರೇಣುಕಮ್ಮ ಸಂಸ್ಥೆ ಪುಸ್ತಕ ಓದುವ ಕಲೆಯನ್ನು ಮಕ್ಕಳಿಗೆ ಕಲಿಸಬೇಕು ಹಾಗೂ ಕಥೆಯನ್ನು ಮಕ್ಕಳು ಓದಬೇಕು ಹಾಗೂ ಕಥೆಯನ್ನು ಹೇಳಬೇಕು ಕಥೆ ಹೇಳುವ ಸಂಸ್ಕೃತಿ ಮರೆಯಾಗುತ್ತಿದೆ ಹಿಂದೆ ಪೂರ್ವಜರು ಮನೆಗಳಲ್ಲಿ ಕಥೆಯನ್ನು ಹೇಳುತ್ತಾ ಮಹಾಭಾರತ ರಾಮಾಯಣವನ್ನು ಜನಮಾನಸದಲ್ಲಿ ಉಳಿಸಿದ್ದರು ಆದರೆ ಇಂದು ಮೊಬೈಲ್ ಬಂದು ಮಾನವೀಯ ಮೌಲ್ಯಗಳು ಮರೆತು ಮೊಬೈಲ್ ಗೆ ದಾಸರಾಗಿ ಕುಳಿತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕಳ್ಳಿಪಾಳ್ಯ ಹಾಗೂ ಮಣ್ಣಿಗನಹಳ್ಳಿ ಇತರೆ ಶಾಲೆಗಳಿಗೆ ಮಹಾಭಾರತ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಕೆಲಸವನ್ನು ಮಾಡಲಾಯಿತು.

ಗುಡ್ಡದ ರಂಗನಾಥ ಸ್ವಾಮಿ ಸೇವಾ ಸಂಸ್ಥೆಯ ಪೀಠಾಧ್ಯಕ್ಷರಾದ ರಾಮಸ್ವಾಮಿ, ಹುಳ್ಳೆನಹಳ್ಳಿ ರವೀಶ್, ಭಕ್ತ ಮುನೇಶ್ವರ ಸಂಸ್ಥೆಯ ಆನಂದ್, ಆಹಾರ ಮತ್ತು ಔಷಧ ಸುರಕ್ಷಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗೋವಿಂದರಾಜು,ಪ್ರಾಂಶುಪಾಲರದ ವಿನೋದ್ ಕುಮಾರ್,ಕನ್ನಡ ಶಿಕ್ಷಕರಾದ ನಾಗರತ್ನ, ಶಾಲಾ ಸಮನ್ವಯ ವೇದಿಕೆಯ ಅಶೋಕ್, ಉದ್ಯಮಿಗಳಾದ ರಂಜಿತ್ ,ಅಶ್ವಿನಿ, ಅಂಚೆ ಇಲಾಖೆಯ ರಮೇಶ್ ಹಾಗೂ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಮತ್ತು ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.