ಸೋಮವಾರ, ಆಗಸ್ಟ್ 2, 2021
20 °C
ರೋಟರಿ ಸಿಲ್ಕ್ ಸಿಟಿ ಪದಾಧಿಕಾರಿಗಳ ಪದಗ್ರಹಣ

ಸೇವೆಯಿಂದ ಆತ್ಮ ತೃಪ್ತಿ ಲಭ್ಯ: ಹೊನ್ನೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸೇವೆ ಎನ್ನುವುದು ಆತ್ಮ ಸಂತೋಷ ಮತ್ತು ಆತ್ಮ ತೃಪ್ತಿ ನೀಡುತ್ತದೆ. ಅದನ್ನು ಜೀವನದ ಅವಿಭಾಜ್ಯ ಅಂಗ ಎಂದು ಭಾವಿಸಿಕೊಂಡಿರುವ ಜನರು ಸದಾ ಸಂತೋಷದಿಂದ ಇರುತ್ತಾರೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ವಲಯ ಪಾಲಕ ಹೊನ್ನೇಗೌಡ ತಿಳಿಸಿದರು.

ನಗರದ ಎಬಿಆರ್ ರೆಸ್ಟೋರೆಂಟ್ ಸಭಾಂಗಣದಲ್ಲಿ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ 2021-2022ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಸೇವಾ ಮನೋ ಭಾವ ರೂಢಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರೋಟರಿ ಸಿಲ್ಕ್ ಸಿಟಿ ನೂತನ ಅಧ್ಯಕ್ಷ ಸೋಮಶೇಖರ್ ರಾವ್ ಕಾಂಬ್ಳೆ ಮಾತನಾಡಿ, ಸಂಸ್ಥೆಯು ಈಗಾಗಲೇ ಸಮಾಜಮುಖಿ ಸಂಸ್ಥೆಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಕೆಲಸಗಳ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ರೋಟರಿ ಸಂಸ್ಥೆಯ ಜಿಲ್ಲಾ ಸಹ ಪಾಲಕ ಬಿ.ಆರ್. ಆನಂದ್, ರೋಟರಿ ಸಿಲ್ಕ್ ಸಿಟಿ ನೂತನ ಕಾರ್ಯದರ್ಶಿ ಚಂದ್ರಪ್ಪ, ನಿರ್ಗಮಿತ ಅಧ್ಯಕ್ಷ ಎನ್. ರವಿಕುಮಾರ್, ಬಿ. ಗೋಪಾಲ್, ಎಲ್. ಪ್ರಭಾಕರ್, ಎ.ಜೆ. ಸುರೇಶ್, ಪದಾಧಿಕಾರಿಗಳಾದ ದೀಪಕ್, ರಾಘವೇಂದ್ರ, ಪರಮೇಶ್, ನರಸಿಂಹರಾಜು, ಆರ್.ಪಿ. ಪ್ರದೀಪ್, ಆರ್. ಶಿವರಾಜ್, ಧನರಾಜ್, ಪ್ರಕಾಶ್, ಲತಾ ಗೋಪಾಲ್, ಸತೀಶ್, ನವೀನ್‍ಕುಮಾರ್, ಮಂಜುನಾಥ್, ನೂತನ ಸದಸ್ಯರಾದ ಸಿ. ಪುರುಷೋತ್ತಮ್, ಗುರುರಾಜ್, ರಾಘವೇಂದ್ರ, ಲೋಕೇಶ್, ನಾಗೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು