ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮೂರ ತಿಂಡಿ | ನಾಲಿಗೆ ತಣಿಸುವ ಮೆತ್ತನೆಯ ತಟ್ಟೆ ಇಡ್ಲಿ, ಕೆಂಪು ಖಾರ ಚಟ್ನಿ

ಸುಧೀಂದ್ರ ಸಿ.ಕೆ.
Published 9 ಜೂನ್ 2024, 8:09 IST
Last Updated 9 ಜೂನ್ 2024, 8:09 IST
ಅಕ್ಷರ ಗಾತ್ರ

ಹೋಟೆಲ್‌ನಲ್ಲಿ ಸಿಗುವ ತಿಂಡಿ: ಒಂದು ಇಂಚು ದಪ್ಪನೆ ತಟ್ಟೆ ಇಡ್ಲಿ, ಖಾರ ಚಟ್ನಿ, ಬೋಂಡಾ, ಎಳ್ಳಿಕಾಯಿ ಚಿತ್ರಾನ್ನ

ಮಾಗಡಿ ಡೂಮ್ ಲೈಟ್ ವೃತ್ತದಲ್ಲಿ ಇರುವ ಮಾದೇಶ್ವರ ಕುಂಬಾರು ಹೋಟೆಲ್‌ ತಟ್ಟೆ ಇಡ್ಲಿ, ಖಾರ ಚಟ್ನಿಗೆ ಸಾಕಷ್ಟು ಪ್ರಸಿದ್ಧಿ ‍ಪಡೆದಿದೆ. ಇಲ್ಲಿ ಸಿಗುವ ಮೆತ್ತನೆಯ ತಟ್ಟೆ ಇಡ್ಲಿ ಬೇರೆಲ್ಲೂ ಸಿಗುವುದಿಲ್ಲ. ಒಂದು ತಟ್ಟೆ ಇಡ್ಲಿ ಸೇವಿಸಿದರೆ ಹೊಟ್ಟೆ ತುಂಬಿ ಹೋಗುತ್ತದೆ. ಎರಡು ಇಡ್ಲಿ ತಿನ್ನಲು ಆಗೋದೇ ಇಲ್ಲ. ಇಲ್ಲಿ ಕೊಡುವ ಖಾರವಾದ ಕೆಂಪು ಚಟ್ನಿ ಸವಿಯಲೆಂದೇ ಗ್ರಾಹಕರು ಇಲ್ಲಿಗೆ ಬರುತ್ತಾರೆ.

ತಟ್ಟೆ ಇಡ್ಲಿ ಜತೆಗೆ ವಿಶೇಷವಾಗಿ ಆಲೂಗಡ್ಡೆ, ಈರುಳ್ಳಿ, ಪಲ್ಯ ಮೇಲೊಂದಿಷ್ಟು ಹಸುವಿನ ತುಪ್ಪ ಸುರಿಯಲಾಗುತ್ತದೆ. ಜತೆಯಲ್ಲಿ ಬೋಂಡಾ ಕೂಡ ಇರುತ್ತದೆ. ಮಾಗಡಿಯಲ್ಲಿ ವ್ಯವಹಾರ ನಡೆಸಲು ಬರುವ ಗ್ರಾಮೀಣರು ಬೆಳಗ್ಗೆ ಇಲ್ಲಿಗೆ ಬಂದು ತಟ್ಟೆ ಇಡ್ಲಿ ಸವಿದು ಹೋಗುವುದು ವಾಡಿಕೆ. 

ಶನಿವಾರ ಮತ್ತು ಭಾನುವಾರ ಬೆಂಗಳೂರು ಸೇರಿದಂತೆ ಅನೇಕ ಕಡೆಯಿಂದ ಇಡ್ಲಿ ಸವಿಯಲೆಂದೇ ಗ್ರಾಹಕರು ಇಲ್ಲಿಗೆ ಬರುತ್ತಾರೆ. ಒಂದು ದಿನಕ್ಕೆ 300 ರಿಂದ 350 ತಟ್ಟೆ ಇಡ್ಲಿ ಮಾರಾಟವಾಗುತ್ತಿದೆ. 1976ರಲ್ಲಿ ಆರಂಭವಾದ ಈ ಹೋಟೆಲ್‌ನಲ್ಲಿ ಇಲ್ಲಿವರೆಗೂ ಗ್ರಾಹಕರಿಗೆ ರುಚಿಯಾದ ತಿಂಡಿ ನೀಡುತ್ತಾ ಬರಲಾಗುತ್ತಿದೆ. 48 ವರ್ಷಗಳಿಂದಲೂ ಸೌದೆ ಒಲೆಯಿಂದಲೇ ತಯಾರಿ ಮಾಡುವುದು ಇಲ್ಲಿನ ವಿಶೇಷ.

ಬೆಳಗ್ಗೆ 6ರಿಂದ 12ಗಂಟೆವರೆಗೂ ಮಾತ್ರ ಇಲ್ಲಿ ವ್ಯಾಪಾರ ನಡೆಯುತ್ತದೆ. ಮಾಲೀಕ ಬಸವರಾಜು, ಅವರ ಪತ್ನಿ ರಾಜಮ್ಮ, ಪುತ್ರ ಮಹೇಶ್‌ ಸೇರಿ ಹೋಟೆಲ್‌ ನಡೆಸಿಕೊಂಡು ಬರುತ್ತಿದ್ದಾರೆ.

1976ರಲ್ಲಿ ಒಂದು ತಟ್ಟೆ ಇಡ್ಲಿಗೆ ಒಂದು ರೂಪಾಯಿ ಇತ್ತು. ಇಂದು ಒಂದು ತಟ್ಟೆ ಇಡ್ಲಿ ಎರಡು ಬೋಂಡಾ ಸೇರಿ ₹30 ಮಾರಾಟ ಮಾಡಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಾರೆ.

ಮಾಹಿತಿ: 9844940229

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT