ಸೋಮವಾರ, ಸೆಪ್ಟೆಂಬರ್ 20, 2021
23 °C

ಚನ್ನಪಟ್ಟಣ: ಭೀಮನ ಅಮಾವಾಸ್ಯೆ; ವಿಶೇಷ ಅಲಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಭೀಮನ ಅಮಾವಾಸ್ಯೆ ಪ್ರಯಕ್ತ ಭಾನುವಾರ ತಾಲ್ಲೂಕಿನ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

ಬೆಳಿಗ್ಗೆಯಿಂದಲೇ ನಡೆದ ಪೂಜೆಯಲ್ಲಿ ಭಕ್ತರು, ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡಿದ್ದು ಕಂಡುಬಂತು. ದೇವಾಲಯಗಳಲ್ಲಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜೆ, ಹೋಮ, ಹವನ ನಡೆದವು. ಕೆಲವು ದೇವಾಲಯಗಳಲ್ಲಿ ಅನ್ನದಾನ, ಪ್ರಸಾದ ವಿತರಣೆ ಮಾಡಲಾಯಿತು.

ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ, ಮಳೂರು ಅಪ್ರಮೇಯಸ್ವಾಮಿ, ಅರ್ಕೇಶ್ವರಸ್ವಾಮಿ, ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ, ಬೇವೂರು ತಿಮ್ಮಪ್ಪಸ್ವಾಮಿ, ಕರಿಯಪ್ಪನದೊಡ್ಡಿ ವೆಂಕಟೇಶ್ವರಸ್ವಾಮಿ, ನೀಲಕಂಠನಹಳ್ಳಿ ತಿರುಮಲಸ್ವಾಮಿ, ಹುಣಸನಹಳ್ಳಿ ಬಿಸಲಮ್ಮ ದೇವಿ, ಕೋಡಂಬಹಳ್ಳಿ ಮರಳೇಶ್ವರಸ್ವಾಮಿ, ಕೂಡ್ಲೂರು ಶಿವ ದೇವಾಲಯ, ಹೊಂಗನೂರು ಶಿವ ದೇವಾಲಯ, ಹುಚ್ಚಯ್ಯನದೊಡ್ಡಿ ಮಹದೇಶ್ವರಸ್ವಾಮಿ, ಪಟ್ಟಣದ ಮಹದೇಶ್ವರಸ್ವಾಮಿ, ವರದರಾಜಸ್ವಾಮಿ, ಕೋಟೆ ಆಂಜನೇಯಸ್ವಾಮಿ, ಎಲೇಕೇರಿ ಆಂಜನೇಯಸ್ವಾಮಿ, ಕೊಲ್ಲಾಪುರದಮ್ಮ ದೇವಸ್ಥಾನ ಸೇರಿದಂತೆ ಎಲ್ಲೆಡೆ ನಡೆದ ಪೂಜೆಯಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.