ರಾಮನಗರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯಾದ್ಯಂತ ವಿಶೇಷ ಪೂಜೆ, ಹೋಮ-ಹವನಗಳನ್ನು ಏಕಕಾಲಕ್ಕೆ ಹಮ್ಮಿಕೊಳ್ಳಲಾಯಿತು. ಈ ಪುಣ್ಯಸ್ಥಳದಲ್ಲಿ ಗತವೈಭವ ಮರುಕಳಿಸಲಿ ಎಂಬ ಹಾರೈಸಲಾಯಿತುಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು ತಿಳಿಸಿದರು.

ನಗರದ ವೀರಭದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ, ಸಂಘ ಪರಿವಾರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಪೂಜೆ, ಹೋಮ-ಹವನ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ರಾಮಮಂದಿರ ನಿರ್ಮಾಣದ ಹಿಂದೆ ಸಂಘ -ಪರಿವಾರ, ಬಿಜೆಪಿ ಪ್ರಮುಖ ನಾಯಕರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಹೋರಾಟದ ಕೊಡುಗೆ ಇದೆ. ಈಗ ಎಲ್ಲ ಸಮಸ್ಯೆಗಳೂ ನಿವಾರಣೆಯಾಗಿದ್ದು, ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆಯುವ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾಗುತ್ತಿದ್ದೇವೆ’ ಎಂದರು.

ರಾಷ್ಟ್ರೀಯ ಪರಿಷತ್ ಸದಸ್ಯ ಜಯಣ್ಣ ಮಾತನಾಡಿ, ಕೋಟ್ಯಂತರ ಮಂದಿಯ ಭಾವನಾತ್ಮಕ ಕ್ಷೇತ್ರವಾಗಿರುವ ಆಯೋಧ್ಯಾ ಪುಣ್ಯಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಿದ ಈ ದಿನ ಶುಭ ದಿನವಾಗಿದ್ದು, ಕಟ್ಟಡ ಕಾರ್ಯ ಆರಂಭಗೊಂಡಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಭಾರತೀಯ ಭೂಪಟದಲ್ಲಿ ಅಯೋಧ್ಯೆ ಮತ್ತೆ ವಿಜೃಂಭಿಸಲಿ ಎಂದು ಶುಭ ಹಾರೈಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಡಿ.ನರೇಂದ್ರ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಎಲೆಕೇರಿ ರವೀಶ್, ನಗರ ಘಟಕದ ಅಧ್ಯಕ್ಷ ಪಿ.ಶಿವಾನಂದ್, ಜೆ.ದರ್ಶನ್, ಜಿಲ್ಲಾ ಮಾಧ್ಯಮ ಪ್ರಮುಖ್ ಚಂದ್ರಶೇಖರ ರೆಡ್ಡಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಗೋಪಾಲ್ ರಾಂಪುರ, ಗುಂಗರಹಳ್ಳಿ ಚನ್ನಪ್ಪ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ, ಪುಷ್ಪಾ ಆರಾಧ್ಯ, ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಸಾದ ವಿತರಣೆ: ಶ್ರೀರಾಮ ಮಂದಿರ ನಿರ್ಮಾಣದ ಭೂಮಿಪೂಜೆ ಹಿನ್ನೆಲೆಯಲ್ಲಿ ನಗರದ ರಾಮಮಂದಿರ ದೇವಾಲಯದಲ್ಲಿ ನಗರ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಡಿ.ನರೇಂದ್ರ ನೇತೃತ್ವದಲ್ಲಿ ಭಕ್ತರಿಗೆ ಪ್ರಸಾದದ ಪ್ಯಾಕೆಟ್ ಗಳನ್ನು ವಿತರಿಸಲಾಯಿತು.

ರಾಮಜನ್ಮ ಭೂಮಿ ಸಂಬಂಧ ಈ ನೆಲದಲ್ಲಿ ಅನೇಕ ಹೋರಾಟಗಳು ನಡೆದಿವೆ. ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡೆ-ತಡೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಗೆಹರಿದಿವೆ. ಹೀಗಾಗಿ, ಇಂದು ಎಲ್ಲರೂ ಅದಕ್ಕೆ ಬದ್ಧರಾಗಿ ನಡೆಯಬೇಕಾಗಿರುವುದು ಕರ್ತವ್ಯವಾಗಿದೆ ಎಂದು ನರೇಂದ್ರ ಹೇಳಿದರು. ಬಿಜೆಪಿ ಮುಖಂಡರು ಜೊತೆಗಿದ್ದರು.

ಕರಸೇವಕರಿಗೆ ಸನ್ಮಾನ

1997ರ ಡಿಸೆಂಬರ್ 6 ಮತ್ತು 7ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕಟ್ಟಡದ ತೆರವಿನಲ್ಲಿ ಪಾಲ್ಗೊಂಡ ಜಿಲ್ಲೆಯ ಕರಸೇವಕರು ಹಾಗೂ ಅವರ ಕುಟುಂಬದವರನ್ನು ನಗರದ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ಸನ್ಮಾನಿಸಲಾಯಿತು. ಕರಸೇವೆಯಲ್ಲಿ ಭಾಗವಹಿಸಿದ್ದ ಬಿ.ನಾಗೇಶ್, ಎಸ್.ಆರ್. ನಾಗರಾಜ್, ದಾಸಪ್ಪ , ಶಿವರಾಂ, ಯೋಗ ನರಸಿಂಹಯ್ಯ, ರಾಜಣ್ಣ ಅವರನ್ನು ಭಕ್ತರು ಸನ್ಮಾನಿಸಿದರು.

ಕರಸೇವಕರಾದ ಪುಟ್ಟಮಾಸ್ತಿ ಗೌಡ, ವೇಣು ಗೋಪಾಲ್, ಜ್ವಾಲಾ ದೇವರಾಜು ಮತ್ತು ರೇವಣ್ಣ ಅವರುಗಳು ಮೃತಪಟ್ಟಿದ್ದು, ಅವರ ಪರವಾಗಿ ಕುಟುಂಬ ಸದಸ್ಯರು ಸನ್ಮಾನ ಸ್ವೀಕರಿಸಿದರು. ಕರಸೇವಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಿಜೆಪಿ ಮುಖಂಡರಾದ ವರದರಾಜೇಗೌಡ, ಮುರುಳೀಧರ್, ರಮೇಶ್, ಪ್ರವೀಣ್ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.