ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದೂರು: ಸುಗ್ಗಿ ಸಂಭ್ರಮ

Published 7 ಫೆಬ್ರುವರಿ 2024, 8:01 IST
Last Updated 7 ಫೆಬ್ರುವರಿ 2024, 8:01 IST
ಅಕ್ಷರ ಗಾತ್ರ

ಕುದೂರು: ಹೋಬಳಿಯ ಕೆಂಕೆರೆ ಪಾಳ್ಯ ಗ್ರಾಮದಲ್ಲಿ ಸುಗ್ಗಿ ಸಂಭ್ರಮ, ಗುರುವಂದನೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಸಮಾಧಾನ ಮಠದ ಜಡೆ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಪೂರ್ವಿಕರ ಬೇಸಾಯ ಪದ್ದತಿ ನಶಿಸದಂತೆ ಮುಂದಿನ ತಲೆಮಾರಿಗೆ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಆಧುನಿಕ ಯಂತ್ರೋಪಕರಣಗಳ ಭರಾಟೆಯಲ್ಲಿ ಗ್ರಾಮೀಣ ಕಣದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಪುರಾತನ ಕೃಷಿ ಪದ್ಧತಿ ಉಳಿಸಲು ರೈತರು ಮುಂದಾಗಬೇಕು ಎಂದರು. 

ಗ್ರಾಮಕ್ಕೆ ದೇವಾಲಯ ಮುಖ್ಯ. ಅದನ್ನು ಗ್ರಾಮಸ್ಥರು ಒಗ್ಗೂಡಿ ನಿರ್ಮಿಸಿ ಶಾಂತಿ, ನೆಮ್ಮದಿಯಿಂದ ಇರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಭಜನಾ ಮಂಡಳಿಯಿಂದ ಗಾನ ಸುಧೆ ಮತ್ತು ನೃತ್ಯ ನಡೆಯಿತು. ವೀರಗಾಸೆ, ಮಂಗಳವಾಧ್ಯ, ಚಿಟ್ಟಿ ಮೇಳ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ಗ್ರಾಮದಲ್ಲಿ ನಡೆಯಿತು.

ಮೂಡಿವಿರಕ್ತ ಮಠದ ಸದಾಶಿವ ಸ್ವಾಮೀಜಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಗದೀಶ್, ತ್ಯಾಗರಾಜು, ಶಿವಕುಮಾರಾಧ್ಯ, ಎಂ.ಜಿ. ನರಸಿಂಹಮೂರ್ತಿ, ಶಿವಪ್ರಸಾದ್, ಕಮಲಮ್ಮ, ಮಹೇಶ್, ಕಣ್ಣೂರು ಚಂದ್ರಣ್ಣ, ಪ್ರಭುದೇವರು, ದೇವರಾಜು, ಸಿದ್ದಲಿಂಗಮೂರ್ತಿ, ರಂಗಣ್ಣ, ಮಹೇಂದ್ರ, ಬಸವರಾಜು, ಶೇಖರ್, ಕುಮಾರ್, ಲಕ್ಷ್ಮಣ, ಹರ್ಷ, ನಾರಸಂದ್ರ ಸುರೇಶ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT