ಸಭೆಯಲ್ಲಿ ‘ಪ್ರಜಾವಾಣಿ’ ವರದಿ ಪ್ರಸ್ತಾಪ
ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಗಿ ರೋಗಿಗೆ ಅವಧಿ ಮೀರಿದ ಗ್ಲುಕೋಸ್ ನೀಡಿದ ಕುರಿತು ‘ಪ್ರಜಾವಾಣಿ’ಯಲ್ಲಿ ಎರಡು ದಿನಗಳ ಹಿಂದೆ (ಜುಲೈ 10) ಪ್ರಕಟವಾಗಿದ್ದ ವರದಿಯನ್ನು ಜಿಲ್ಲಾಧಿಕಾರಿ ಸಭೆಯಲ್ಲಿ ಪ್ರಸ್ತಾಪಿಸಿದರು. ‘ಲಸಿಕೆಗಳು ಔಷಧಗಳು ಮಾತ್ರೆ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳ ದಾಸ್ತಾನು ತೆಗೆದುಕೊಳ್ಳುವಾಗ ಅವುಗಳ ಅವಧಿಯನ್ನು ಸಹ ಪರಿಶೀಲಿಸಬೇಕು. ದಾಸ್ತಾನಿರಿಸಿದ ಔಷಧಗಳ ಅವಧಿ ಮುಗಿದ್ದಿದ್ದರೆ ವಿಲೇವಾರಿಗೆ ಕ್ರಮ ವಹಿಸಬೇಕು. ಮಾಗಡಿಯಲ್ಲಿ ರೋಗಿಯೊಬ್ಬರಿಗೆ ಅವಧಿ ಮೀರಿದ ಗ್ಲುಕೋಸ್ ನೀಡಿದ ಪ್ರಕರಣ ಮತ್ತೆ ಮರುಕಳಿಸಿದರೆ ಸಂಬಂಧಿಸಿದವರನ್ನೇ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.