ರಾಮನಗರ: ‘ಸ್ಫೂರ್ತಿಯ ಚಿಲುಮೆಯಾಗಿದ್ದ ಸ್ವಾಮಿ ವಿವೇಕಾನಂದ ಅವರು ಈ ನೆಲ ಕಂಡ ಅಪರೂಪದ ಸನ್ಯಾಸಿ ಹಾಗೂ ಅಧ್ಯಾತ್ಮ ಚಿಂತಕ. ಮಾನವೀಯ ಮೌಲ್ಯಗಳ ಜೊತೆಗೆ ಸಮಗ್ರ ಏಕತೆಯ ಚಿಂತನಾ ಸಿದ್ಧಾಂತವನ್ನು ವಿಶ್ವಕ್ಕೆ ಬೋಧಿಸಿದ ಮೇರು ವ್ಯಕ್ತಿ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಬಣ್ಣಿಸಿದರು.

ನಗರದ ನಗರಸಭೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ‘ವಿವೇಕಾನಂದ ಅವರು ಕೇವಲ ಹಿಂದೂ ಧರ್ಮದ ಚಿಂತಕರಷ್ಟೇ ಆಗಿರಲಿಲ್ಲ. ಜಗತ್ತಿನ ಎಲ್ಲಾ ಧರ್ಮಗಳ ಸಾರವನ್ನು ಅರಿತಿದ್ದ ಪಂಡಿತರಾಗಿದ್ದರು’ ಎಂದರು.

‘ಹಿಂದೂ ಧರ್ಮದಲ್ಲಿದ್ದ ಅಸ್ಪೃಶ್ಯತೆ ಸೇರಿದಂತೆ ವಿವಿಧ ಹುಳುಕುಗಳನ್ನು ಖಾರವಾಗಿ ಪ್ರಶ್ನಿಸಿದ ಅವರು, ಎಲ್ಲರನ್ನೂ ಒಳಗೊಂಡು ಒಳಿತು ಬಯಸುವ ಮಾನವ ಧರ್ಮದ ಅಗತ್ಯವನ್ನು ಒತ್ತಿ ಹೇಳಿದರು. ಷಿಕಾಗೊದಲ್ಲಿ 1893ರಲ್ಲಿ ನಡೆದ ವಿಶ್ವ ಧರ್ಮಗಳ ಸಂಸತ್ತಿನಲ್ಲಿ, ಧರ್ಮ ಸಹಿಷ್ಣುತೆ ಮತ್ತು ಸಹೋದರತ್ವದ ಕುರಿತು ವಿವೇಕಾನಂದರು ನೀಡಿದ ಸಂದೇಶಕ್ಕೆ ಇಡೀ ಜಗತ್ತು ತಲೆದೂಗಿತು’ ಎಂದು ತಿಳಿಸಿದರು.

‘ವಿವೇಕಾನಂದ ಧಾರ್ಮಿಕ ಚಿಂತನೆಗಳಿಂದ ಹಲವು ಮಹನೀಯರು ಪ್ರಭಾವಿತರಾಗಿದ್ದರು. ಯುವಜನರು ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ, ಶಿಕ್ಷಣ, ಸೌಹಾರ್ದ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಪೌರಾಯುಕ್ತ ಡಾ. ಜಯಣ್ಣ ಮಾತನಾಡಿ, ‘ಭಾರತೀಯ ಸಂಸ್ಕೃತಿಯ ಸಾರವನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದ ಯುಗ ಪುರುಷರು. ರಾಮಕೃಷ್ಣ ಪರಮಹಂಸರ ಪರಮ ಶಿಷ್ಯರಾಗಿದ್ದ ಅವರು, ತಮ್ಮ ವಿದ್ವತ್ತು ಹಾಗೂ ವಾಕ್ಚಾತುರ್ಯದಿಂದಾಗಿ ಜಗತ್ತಿನ ಗಮನ ಸೆಳೆದರು ’ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ಪಾರ್ವತಮ್ಮ, ನರಸಿಂಹ, ಅಸ್ಮತ್ ಉಲ್ಲಾ ಖಾನ್, ಜಯಲಕ್ಷ್ಮಮ್ಮ, ಗ್ಯಾಬ್ರಿಯಲ್, ಸೋಮಶೇಖರ್, ಮುಖಂಡರಾದ ಶಿವಶಂಕರ್, ವೆಂಕಟೇಶ್, ಗೂಳಿ ಕುಮಾರ್, ನಗರಸಭೆ ಪರಿಸರ ಎಂಜಿನಿಯರ್ ಸುಬ್ರಮಣ್ಯ, ಅಧಿಕಾರಿಗಳಾದ ವಿಜಯಕುಮಾರ್, ನಟರಾಜೇಗೌಡ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.