ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಕ್ವಾಂಡೊ: ಚಿನ್ನ, ಬೆಳ್ಳಿ ಸಾಧನೆ

Published 20 ಜುಲೈ 2023, 6:36 IST
Last Updated 20 ಜುಲೈ 2023, 6:36 IST
ಅಕ್ಷರ ಗಾತ್ರ

ರಾಮನಗರ: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಟೇಕ್ವಾಂಡೋ ಚಾಂಪಿಯನ್‌ಶಿಪ್ -2023 ಸಬ್ ಜ್ಯೂನಿಯರ್, ಕೆಡಿಟ್ ಹಾಗೂ ಜೂನಿಯರ್ –ಸೀನಿಯರ್ ಪಂದ್ಯಾವಳಿಯಲ್ಲಿ ರಾಮನಗರದ ಹೋಲಿ ಕ್ರೆಸೆಂಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ಕ್ರೀಡಾಪಟುಗಳು ಚಿನ್ನ ಹಾಗೂ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ.

ಕೋರಮಂಗಲ ಒಳ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಶಾಲೆಯ 14 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಪೂಂಸೇ ವಿಭಾಗದಲ್ಲಿ ನಿಹಾರಿಕಾ ಎಸ್ ಮತ್ತು ಹರ್ಷವರ್ಧನ ಆರ್. ಚಿನ್ನದ ಪದಕ ಸಾಧನೆ ಮಾಡಿದರು. ಸೇವಂತ್ ರಾಜ್, ಸೈಯದ್ ಅಬೂಬಕರ್, ಅಭಯ್ ಬೆಳ್ಳಿ ಪದಕ ಪಡೆದರು.

ಭಾವನಾ ಎಸ್., ಧರಣಿ, ಚಿನ್ವಿತಾ ಕೆ.ಎಸ್, ಮನ್ನಾ ಕೌನಿನ್, ಬಿಂದು ಎಂ., ಹೇಮಂತ್ ಕುಮಾರ್ ವಿ., ಅಭಿಷೇಕ್, ಅಕ್ಷಯ್ ಹಾಗೂ ಗೌರವ್ ಕಂಚಿನ ಪದಕಕ್ಕೆ ಭಾಜನರಾದರು. ಕ್ರೀಡಾಪಟುಗಳಿಗೆ ಸತೀಶ್ ಎಂ. ಹಾಗೂ ರಾಮನಗರ ಜಿಲ್ಲೆ ಟೇಕ್ವಾಂಡೊ ತರಬೇತಿ ಕೇಂದ್ರದ ಅಧ್ಯಕ್ಷ ಆರ್. ಕೃಷ್ಣಮೂರ್ತಿ ತರಬೇತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT