ಮಾಗಡಿ: ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ
ಅ. ದೇವೇಗೌಡ ತಿಳಿಸಿದರು.

ತಾಲ್ಲೂಕಿನ ಶ್ರೀಪತಿಹಳ್ಳಿಯಲ್ಲಿ ನಡೆದ ನಡೆದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ತಿರುಮಲೆ ಮಾಂಡವ್ಯ ಗುಹೆಯ ಸುತ್ತಲಿನ ಸರ್ಕಾರಿ ಜಮೀನು ಗುರುತಿಸಿ ಅಕ್ರಮ ಒತ್ತುವರಿ ತಡೆಗಟ್ಟಬೇಕು. ಗುಹೆಯ ಮೇಲಿನ ಕೆಂಪೇಗೌಡರ ಕಾಲದ ಗೋಪುರವನ್ನು ದುರಸ್ತಿಪಡಿಸಲಾಗುವುದು ಎಂದು
ಹೇಳಿದರು.

ಗುಹೆಗೆ ಹೋಗಲು ಇರುವ ಸರ್ಕಾರಿ ರಸ್ತೆಯನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ತಹಶೀಲ್ದಾರ್ಗೆ ಸೂಚಿಸಿದರು.

ಸೋಮೇಶ್ವರ ಸ್ವಾಮಿ ಹಿಂಬದಿ ಇರುವ ಬಂಡೆಯ ಮೇಲಿನ ಕೆಂಪೇಗೌಡರ ಕಲಾತ್ಮಕ ಗೋಪುರಕ್ಕೆ ಹೋಗುತ್ತಿದ್ದ ರಸ್ತೆಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದರು.

ಬಿಜೆಪಿ ಮುಖಂಡ ಅಶ್ವತ್ಥನಾರಾಯಣ ಗೌಡ ಮಾತನಾಡಿ, ‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನಗೆ 65 ಸಾವಿರ ಮತ ನೀಡಿರುವ ಮತದಾರರನ್ನು ಮರೆಯುವುದಿಲ್ಲ. ತಾಲ್ಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡರಾದ ಬ್ಯಾಲಕೆರೆ ಮಹೇಶಯ್ಯ, ಕಲ್ಯಾ ಗೇಟ್ ದಯಾನಂದ್, ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ರಾಮಪ್ರಸಾದ್, ಪಾಳ್ಯದಹಳ್ಳಿ ಹನುಮಂತೇಗೌಡ, ಗೆಜ್ಜಗಾರುಗುಪ್ಪೆ ಧನಂಜಯ, ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.