ಮಾಗಡಿ: ಪಟ್ಟಣದ ಹೊಸಪೇಟೆಯ ರಂಗನಾಥ ಕೃಪಾಪೋಷಿತ ಕಲಾಸಂಘದ ವತಿಯಿಂದ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗನಿರ್ದೇಶಕ ಎಚ್.ಎಂ.ನಾರಾಯಣಪ್ಪ ಅವರ ಮಾರ್ಗದರ್ಶನದಲ್ಲಿ ಜೂನ್ 21ರಿಂದ 23ರವರೆಗೆ ನಾಟಕೋತ್ಸವ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ವೆಂಕಟೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

21 ರಂದು ಬೆಳಿಗ್ಗೆ 10 ಗಂಟೆಗೆ ‘ಸಂಪೂರ್ಣ ರಾಮಾಯಣ’, 22ರಂದು ಬೆಳಿಗ್ಗೆ 10 ಗಂಟೆಗೆ ‘ಕುರುಕ್ಷೇತ್ರ’, 23ರಂದು ಬೆಳಿಗ್ಗೆ 10 ಗಂಟೆಗೆ ‘ಶ್ರೀಕೃಷ್ಣ ಸಂಧಾನ’ ಅಥವಾ ‘ದುರ್ಯೋಧನನ ಗರ್ವಭಂಗ’ ಎಂಬ ಪೌರಾಣಿಕ ನಾಟಕಗಳ ಅಭಿನಯ ನಡೆಯಲಿದೆ. ಹಿರಿಯ ರಂಗಕಲಾವಿದರೆಲ್ಲರೂ ಭಾಗವಹಿಸುವರು ಎಂದರು.

ಬಿಜೆಪಿ ಮುಖಂಡ ಎ.ಎಚ್.ಬಸವರಾಜು ನೇತೃತ್ವದಲ್ಲಿ ನಡೆಯಲಿರುವ ನಾಟಕೋತ್ಸವಕ್ಕೆ ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಚಾಲನೆ ನೀಡಲಿದ್ದಾರೆ. ಶಾಸಕ ಎ. ಮಂಜುನಾಥ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ,ಮುಖಂಡರಾದ ಕೆ.ಬಾಗೇಗೌಡ, ಎಚ್.ಆರ್.ಮಂಜುನಾಥ, ಚಂದ್ರೇಗೌಡ, ಬಿ.ವಿ.ಜಯರಾಮು, ಯಜಮಾನ್ ನರಸಿಂಹಮೂರ್ತಿ, ಕೆಂಪಣ್ಣ, ಹಿರಿಯ ರಂಗಕಲಾವಿದೆ ಎಳೆನೀರು ಮುತ್ತಣ್ಣ ಭಾಗವಹಿಸುವರು ಎಂದರು.

ಕಾರ್ಯದರ್ಶಿ ಬಸವರಾಜು, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಮಾಗಡಿ ರಂಗಯ್ಯ, ನಿರ್ದೇಶಕ ಎಚ್.ಎಂ.ನಾರಾಯಣಪ್ಪ, ಸದಸ್ಯರಾದ ಎಸ್.ಎಂ.ರಾಮು, ಸಿದ್ದರಾಜು, ಲಕ್ಷ್ಮೀನಾರಾಯಣ, ದೊಡ್ಡರಂಗಯ್ಯ, ಎಚ್.ಲಕ್ಷ್ಮೀನಾರಾಯಣ, ಎಚ್.ಎನ್.ಪ್ರಕಾಶ್, ಕುಮಾರ್.ಎಚ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.