ಬುಧವಾರ, ನವೆಂಬರ್ 25, 2020
22 °C

ರಾಮನಗರ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಲಾಕೌಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಇಲ್ಲಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆಯು ಅನಿರ್ದಿಷ್ಟ ಅವಧಿಗೆ ಲಾಕೌಟ್ ಘೋಷಣೆ ಮಾಡಿದೆ.

ಅಶಿಸ್ತು ತೋರಿದ ಆರೋಪದ ಮೇಲೆ ಕಾರ್ಮಿಕ ಯೂನಿಯನ್ ಖಜಾಂಚಿ ಉಮೇಶ್ ಆಲೂರು ಎಂಬುವರನ್ನು ಕಂಪನಿಯು ಸೇವೆಯಿಂದ ಅಮಾನತು ಗೊಳಿಸಿತ್ತು. ಇದನ್ನು ಖಂಡಿಸಿ ಕಾರ್ಮಿಕರು ಮಂಗಳವಾರ  ಪ್ರತಿಭಟನೆ ನಡೆಸಿದ್ದರು.

‘ಏಕಾಏಕಿ ಪ್ರತಿಭಟನೆ ನಡೆಸಿದ್ದು ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದಕ್ಕಾಗಿ ಲಾಕೌಟ್ ಘೋಷಿಸಲಾಗಿದೆ. ಕಾರ್ಮಿಕ ಯೂನಿಯನ್ ಜೊತೆ ಮಾತುಕತೆ ನಡೆದಿದೆ’ ಎಂದು ಟಿಕೆಎಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು