ಭಾನುವಾರ, ಆಗಸ್ಟ್ 25, 2019
28 °C

ಜಾನಪದ ಲೋಕಕ್ಕೆ ವೀರೇಂದ್ರ ಹೆಗ್ಗಡೆ ಭೇಟಿ

Published:
Updated:
Prajavani

ರಾಮನಗರ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಗುರುವಾರ ಇಲ್ಲಿನ ಜಾನಪದ ಲೋಕಕ್ಕೆ ಭೇಟಿ ನೀಡಿದರು.

ಅರ್ಧ ಗಂಟೆ ಕಾಲ ಜಾನಪದ ಲೋಕದಲ್ಲಿ ವಿಹರಿಸಿದ ಅವರು, ಇಲ್ಲಿನ ಅಪರೂಪದ ವಸ್ತುಗಳ ಸಂಗ್ರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಕಲಾಕೃತಿಗಳನ್ನು ವೀಕ್ಷಿಸಿದರು. ಎಚ್‌.ಎಲ್‌. ನಾಗೇಗೌಡರ ಕಾರ್ಯಗಳನ್ನು ನೆನೆದು ಅಭಿನಂದನೆ ಸಲ್ಲಿಸಿದರು.

ಜಾನಪದ ಲೋಕದಲ್ಲಿನ ವೈಶಿಷ್ಟ್ಯಗಳು ಮತ್ತು ಕಾರ್ಯವೈಖರಿ ಕುರಿತು ಇಲ್ಲಿನ ಆಡಳಿತಾಧಿಕಾರಿ ಕುರುವ ಬಸವರಾಜು ಹಾಗೂ ಸಿಬ್ಬಂದಿ ಮಾಹಿತಿ ನೀಡಿದರು. ಇದೇ ಸಂದರ್ಭ ಧರ್ಮಸ್ಥಳ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಹೆಗ್ಗಡೆ ಅವರನ್ನು ಸನ್ಮಾನಿಸಿದರು.

Post Comments (+)