‘20 ಕೋಟಿ ಜನರಿಗೆ ಕಿಡ್ನಿ ಸಮಸ್ಯೆ’
‘ದೇಶದಲ್ಲಿ ಸುಮಾರು 20 ಕೋಟಿ ಜನರು ಒಂದಲ್ಲಾ ಒಂದು ರೀತಿಯಲ್ಲಿ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಹೃದಯ ಮೆದುಳಿನಷ್ಟೇ ಕಿಡ್ನಿ ಪಾತ್ರವೂ ಪ್ರಮುಖವಾದುದು. ಕಿಡ್ನಿ ಸಮಸ್ಯೆಗಳನ್ನ ನಿರ್ಲಕ್ಷಿಸುವುದು ತೊಂದರೆಗೆ ಎಡೆಮಾಡಿಕೊಡಲಿದೆ. ಹಾಗಾಗಿ ವರ್ಷಕ್ಕೊಮ್ಮೆ ಕಿಡ್ನಿ ತಪಾಸಣೆ ಮಾಡಿಸಿಕೊಳ್ಳಬೇಕು. ಕಿಡ್ನಿ ಸಮಸ್ಯೆಗಳಿಗೆ ಬದಲಾದ ಜೀವನಶೈಲಿಯೂ ಕಾರಣ. ಹೆಚ್ಚು ನೀರು ಸೇವನೆ ಜಂಕ್‌ಫುಡ್ ಸೇವನೆ ತಗ್ಗಿಸುವುದು ಹಾಗೂ ಬೊಜ್ಜು ಬಾರದಂತೆ ನೋಡಿಕೊಳ್ಳುವ ಮೂಲಕ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಎನ್.ಯು ಆಸ್ಪತ್ರೆ ಯೂರಾಲಜಿಸ್ಟ್ ಡಾ. ವಿನೋದ್ ಕುಮಾರ್ ಹಾಗೂ ಡಾ. ನಿತಿನ್ ನಾಯಕ್ ಸಲಹೆ ನೀಡಿದರು.