ರಾಮನಗರ: ತ್ಯಾಜ್ಯ ವಿಲೇವಾರಿಗೆ ಜಾಗದ ಕೊರತೆಯಿಂದಾಗಿ ನಗರದಲ್ಲಿ ಕೆಲ ದಿನಗಳಿಂದ ತಲೆದೋರಿದ್ದ ಕಸ ಸಂಗ್ರಹ ಮತ್ತು ವಿಲೇವಾರಿ ಸಮಸ್ಯೆಯು ಪೌರ ನೌಕರರು ಎರಡು ದಿನಗಳಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಮತ್ತಷ್ಟು ಉಲ್ಭಣಿಸಿದೆ. ನಗರದ ಪ್ರಮುಖ ರಸ್ತೆಗಳಿಂದಿಡಿದು ಗಲ್ಲಿ ರಸ್ತೆಗಳಲ್ಲಿ ಕಸದ ರಾಶಿಗಳು ತಲೆ ಎತ್ತಿವೆ.

ನಿತ್ಯ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಕಸವು ಕೊಳೆತು ಗಬ್ಬೆದ್ದು ನಾರುತ್ತಿದೆ. ಕಸದ ನೀರು ರಸ್ತೆಗೆ ಹರಿಯುತ್ತಿರುವುದರಿಂದ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಸದ ತಿಪ್ಪಗಳಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಕ್ಕಪಕ್ಕದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು, ನಗದು ರಹಿತ ಚಿಕಿತ್ಸಾ ಸೌಲಭ್ಯದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘದ ಪೌರ ಕಾರ್ಮಿಕರು, ಲೋಡರ್ಗಳು, ಸ್ವಚ್ಛತೆಗಾರರು, ಯುಜಿಡಿ ನಿರ್ವಹಣೆಗಾರರು, ನೀರು ಪೂರೈಕೆದಾರರು, ಕಂಪ್ಯೂಟರ್ ಆಪರೇಟರ್ಗಳು ಸೇರಿದಂತೆ ವಿವಿಧ ಹಂತದ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರ ಆರಂಭಿಸಿದ್ದಾರೆ.

ಎಲ್ಲೆಂದರಲ್ಲಿ ಕಸ: ಇದರಿಂದಾಗಿ ನಗರದಲ್ಲಿ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತಾ ಕೆಲಸ, ಯುಜಿಡಿ ನಿರ್ವಹಣೆ ಎಲ್ಲವೂ ಸ್ಥಗಿತವಾಗಿದೆ. ಎರಡು ದಿನಗಳಿಂದ ಕಸ ಸಂಗ್ರಹದ ವಾಹನಗಳು ತಮ್ಮ ಆವಾಸ್ಥಾನ ಬಿಟ್ಟು ಕದಲಿಲ್ಲ. ಕಸ ಸಂಗ್ರಹ ವಾಹನ ಇಂದಲ್ಲ, ನಾಳೆ ಬರುತ್ತದೆ ಎಂದು ಕಾದು ಹೈರಾಣಾಗಿರುವ ನಾಗರಿಕರು, ವಿಧಿ ಇಲ್ಲದೆ ಮನೆಯಲ್ಲೇ ಕೊಳೆಯುತ್ತಿರುವ ಕಸವನ್ನು ತಂದು ರಸ್ತೆ ಬದಿ, ಖಾಲಿ ನಿವೇಶನ, ಚರಂಡಿ, ಅರ್ಕಾವತಿ ನದಿ ಬದಿಗೆ ಸುರಿದು ಹೋಗುತ್ತಿದ್ದಾರೆ.

ಬೆಂಗಳೂರು–ಮೈಸೂರು ರಸ್ತೆ, ಜೂನಿಯರ್ ಕಾಲೇಜು ರಸ್ತೆ, ರೈಲು ನಿಲ್ದಾಣ ರಸ್ತೆ, ಎಂ.ಜಿ. ರಸ್ತೆ, ಹಳೆ ಬಸ್ ನಿಲ್ದಾಣ ವೃತ್ತ, ಐಜೂರು, ಎಪಿಎಂಸಿ ಮಾರುಕಟ್ಟೆ, ವಿವೇಕಾನಂದನಗರ, ಗಾಂಧಿನಗರ, ಅರ್ಕಾವತಿ ಬಡಾವಣೆ, ಹುಣಸನಹಳ್ಳಿ ರಸ್ತೆ, ಮಾಗಡಿ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ.

ಮನೆಗಳಲ್ಲಿ ನಿತ್ಯ ಉತ್ಪತ್ತಿಯಾಗುವ ಕಸದ ಜೊತೆಗೆ ಮಾರುಕಟ್ಟೆ, ದಿನಸಿ ಅಂಗಡಿ, ಹೂವಿನ ಅಂಗಡಿಗಳು, ಬೀದಿ ವ್ಯಾಪಾರದ ಅಂಗಡಿಗಳು, ತರಕಾರಿ ಅಂಗಡಿಗಳು, ಹೋಟೆಲ್ಗಳು, ಬಾರ್ ಅಂಡ್ ರೆಸ್ಟೊರೆಂಟ್ಗಳು ಸೇರಿದಂತೆ ವಿವಿಧ ರೀತಿಯ ಅಂಗಡಿಗಳ ತ್ಯಾಜ್ಯ ಸಂಗ್ರಹವು ಸ್ಥಗಿತವಾಗಿದ್ದು, ಆ ಕಸವೂ ರಸ್ತೆ ಮತ್ತು ಬೀದಿಗೆ ಬಂದು ಬೀಳುತ್ತಿದೆ.

ತಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಸಂಘವು ಮುಷ್ಕರ ನಿಲ್ಲಿಸದಿರಲು ತೀರ್ಮಾನಿಸಿರುವುದರಿಂದ, ಪೌರ ಕಾರ್ಮಿಕರಾದಿಯಾಗಿ ವಿವಿಧ ಹಂತದ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿ ಮುಂಜಾನೆಯಿಂದ ಮುಸ್ಸಂಜೆವರೆಗೆ ನಗರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ನೌಕರರಿಗೆ ನಗರಸಭೆ ಅಧ್ಯಕ್ಷರು, ಸದಸ್ಯರು ಸೇರಿದಂತೆ ವಿವಿಧ ಸಂಘ–ಸಂಸ್ಥೆ, ಸಂಘಟನೆಗಳ ಪದಾಧಿಕಾರಿಗಳು ಸಹ ಬೆಂಬಲ ಸೂಚಿಸಿದ್ದಾರೆ.

ತಾತ್ಕಾಲಿಕ ವ್ಯವಸ್ಥೆ: ‘ನಗರದ ಕಸ ವಿಲೇವಾರಿಗೆ ಜಾಗ ಗುರುತಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲು ನಗರಸಭೆ ಸತತ ಪ್ರಯತ್ನ ನಡೆಸುತ್ತಲೇ ಇದೆ. ಯಾವುದೇ ಸ್ಥಳ ಅಂತಿಮಗೊಳಿಸಿದರೂ ಅಕ್ಕಪಕ್ಕದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ತಲೆದೋರುತ್ತಿದೆ. ಸದ್ಯ ಒಂದೆರಡು ಸ್ಥಳವನ್ನು ಅಂತಿಮಗೊಳಿಸಿದ್ದು, ತಾತ್ಕಾಲಿಕವಾಗಿ ಅಲ್ಲಿಗೇ ವಿಲೇವಾರಿ ಮಾಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ತಿಳಿಸಿದರು.

ರಾತ್ರೋರಾತ್ರಿ ಕಸ ಎಸೆಯುತ್ತಿರುವ ಜನ

ನಗರಸಭೆಯ ಕಸ ಸಂಗ್ರಹಿಸುವ ವಾಹನ ಮನೆಗೆ ಮತ್ತು ಬೀದಿಗೆ ಬಾರದ ಕಾರಣಕ್ಕೆ ಜನರು ನಾಲ್ಕೈದು ದಿನಗಳಿಂದ ಸಂಗ್ರಹಿಸಿ ಇಟ್ಟುಕೊಂಡಿರುವ ಕಸವನ್ನು ರಾತ್ರೋರಾತ್ರಿ ಚೀಲಗಳಲ್ಲಿ ತಂದು ರಸ್ತೆ ಬದಿಗೆ ಎಸೆದು ಹೋಗುತ್ತಿದ್ದಾರೆ. ಕೆಲಸಕ್ಕೆ ಹೋಗುವವರು ಬೆಳಿಗ್ಗೆ ತಮ್ಮ ದ್ವಿಚಕ್ರ ಸೇರಿದಂತೆ ವಾಹನಗಳಲ್ಲಿ ಕಸದ ಚೀಲವನ್ನು ಮಾರ್ಗಮಧ್ಯೆ ಎಸೆಯುತ್ತಿದ್ದಾರೆ. ‘ಕಸದ ಗಾಡಿ ಬರಲಿದೆ ಎಂದು ಪ್ಲಾಸ್ಟಿಕ್ ಚೀಲಗಳಿಗೆ ಕಸ ತುಂಬಿಟ್ಟುಕೊಂಡು ಐದು ದಿನಗಳವರೆಗೆ ಕಾದೆವು. ಕಡೆಗೆ ಮೂರು ಚೀಲಗಳು ತುಂಬಿದರೂ ವಾಹನ ಬರಲಿಲ್ಲ. ವಿಧಿ ಇಲ್ಲದೆ ಸಮೀಪದ ರಸ್ತೆ ಪಕ್ಕ ಇರುವ ಕಸದ ತಿಪ್ಪೆಗೆ ಕಸದ ಚೀಲಗಳನ್ನು ಎಸೆದು ಬಂದೆವು. ನಗರಸಭೆಯವರು ಆದಷ್ಟು ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ರವಿಶಂಕರ್ ಒತ್ತಾಯಿಸಿದರು.

ತಲೆ ಎತ್ತಿದ ಬ್ಲ್ಯಾಕ್ಸ್ಪಾಟ್ಗಳು

ನಾಲ್ಕು ತಿಂಗಳ ಹಿಂದೆ ನಗರದಲ್ಲಿ ಸುಮಾರು 50 ಕಸದ ಬ್ಲ್ಯಾಕ್ಸ್ಪಾಟ್ಗಳನ್ನು ಗುರುತಿಸಿದ್ದ ನಗರಸಭೆಯು ಸ್ಪಾಟ್ಗಳನ್ನು ಸ್ವಚ್ಛಗೊಳಿಸಿ ಅಲ್ಲಿ ಕಸ ಎಸೆಯದಂತೆ ಕ್ರಮ ಕೈಗೊಂಡಿತ್ತು. ಕಸ ಎಸೆಯುವವರಿಗೆ ದಂಡ ಹಾಕುವ ಎಚ್ಚರಿಕೆಯ ಸೂಚನಾ ಫಲಕಗಳನ್ನು ಸ್ಥಳದಲ್ಲಿ ಅಳವಡಿಸಿತ್ತು. ಅದನ್ನೂ ಮೀರಿ ಕಸ ಎಸೆಯುವವರ ಮೇಲೆ ನಿಗಾ ಇಡಲು 35ಕ್ಕೂ ಹೆಚ್ಚು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಕಸ ವಿಲೇವಾರಿಗೆ ಜಾಗದ ಸಮಸ್ಯೆ ಮತ್ತು ಪೌರ ನೌಕರರ ಮುಷ್ಕರದಿಂದಾಗಿ ಮತ್ತೆ ಬ್ಲ್ಯಾಕ್ಸ್ಪಾಟ್ಗಳು ತಲೆ ಎತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.