ಮಾಗಡಿ: ಹಾಡಹಗಲೇ ಮಹಿಳೆಯೊಬ್ಬರ ದ್ವಿಚಕ್ರ ವಾಹನವನ್ನು ಹಿಂಬದಿಯಿಂದ ಅಡ್ಡಗಟ್ಟಿದ ದುಷ್ಕರ್ಮಿಗಳು ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಮತ್ತು ಇಬ್ಬರು ಮಕ್ಕಳು ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಗಂಭೀರವಾದ ಗಾಯಗೊಂಡಿದ್ದಾರೆ.

ಮಾಗಡಿ-ರಾಮನಗರ ಮುಖ್ಯ ರಸ್ತೆ ಗವಿನಾಗಮಂಗಲ ಗೇಟ್ ಬಳಿ ಮಂಗಳವಾರ ಬೆಳಗ್ಗೆ 9.30 ಸಮಯದಲ್ಲಿ ಈ ಘಟನೆ ನಡೆದಿದೆ. ತಾಲ್ಲೂಕಿನ ವೀರೇಗೌಡನದೊಡ್ಡಿ ಗ್ರಾಮದ ಮೂರ್ತಿನಾಯಕ್ ಎಂಬುವರ ಪತ್ನಿ ನಿರ್ಮಲ ಬಾಯಿ (36) ಸರ ಕಳೆದುಕೊಂಡವರು.

ತಾಲ್ಲೂಕಿನ ವೆಂಕಪ್ಪನಹಳ್ಳಿ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ನಿರ್ಮಲಾ, ಇಬ್ಬರು ಹೆಣ್ಣು ಮಕ್ಕಳಾದ ಕನಿಕಾ, ಖುಷಿ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಪ್ಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ ಇಬ್ಬರು ಹಿಂದಿನಿಂದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

ಡಿವೈಎಸ್ಪಿ ಪ್ರವೀಣ್, ಇನ್ ಸ್ಪೆಕ್ಟರ್ ಜಿ.ವೈ.ಗಿರಿರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೋಡಿ ಪರಿಶೀಲಿಸಿದರು

ಸಿಸಿ ಟಿವಿಯಲ್ಲಿ ಕಳ್ಳರ ಸುಳಿವು: ಮಾಂಗಲ್ಯ ಸರ ಕದ್ದ ದರೋಡೆಕೋರು ಹೊಸಪೇಟೆ ವೃತ್ತದಿಂದ ಬೆಂಗಳೂರು ಮಾರ್ಗವಾಗಿ ಹೋಗಿರುವುದು ಸಿಸಿಟಿವಿ ಕ್ಯಾಮೆರಾರದಲ್ಲಿ ಸೆರೆಯಾಗಿದೆ.

ವಾಹನದಿಂದ ಕೆಳಗಡೆ ಬಿದ್ದ ಮಹಿಳೆ ನಿರ್ಮಲ ಹಾಗೂ ಇಬ್ಬರು ಹೆಣ್ಣು ಮಕ್ಕಳ ಕೈ, ಕಾಲುಗಳಿಗೆ ಪೆಟ್ಟಾಗಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ನಾಗೇಶ್.ಎಸ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.