ಮಂಗಳವಾರ, ಫೆಬ್ರವರಿ 25, 2020
19 °C
MAGADI

’ತಳಸಮುದಾಯದ ಮಹಿಳೆಯರು ಸಂಘಟಿತರಾಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಗ್ಗನಹಳ್ಳಿ(ಮಾಗಡಿ): ತಳಸಮುದಾಯಗಳ ಮಹಿಳೆಯರು ಸಂಘಟಿತರಾಗಿ, ಸರ್ಕಾರಿ ಸವಲತ್ತು ಪಡೆಯಲು ಮುಂದೆ ಬರಬೇಕೆಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಸುಗ್ಗನಹಳ್ಳಿ ಶಾರದಾ ಸ್ತ್ರೀಶಕ್ತಿ ಸಂಘದ ಮಹಿಳೆಯರು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದರು. ನಾಯಕ, ಬೇಡ, ವಾಲ್ಮೀಕಿ, ಇರುಳಿಗ, ಸೋಲಿಗ, ಶಿಳ್ಳೇಕ್ಯಾತ, ದೊಂಬಿದಾಸ, ಬೆಸ್ತ, ಮಡಿವಾಳ, ಸವಿತಾ ಸಮಾಜ, ಕಾಡುಗೊಲ್ಲ, ಬೋವಿ ಇನ್ನಿತರ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರನ್ನು ಗುರುತಿಸಿ ಸರ್ಕಾರಿ ಸವಲತ್ತು ಕಲ್ಪಿಸುವುದಾಗಿ ಭರವಸೆ ನೀಡಿದರು.

ಶಾರದ ಸ್ತ್ರೀಶಕ್ತಿ ಸಂಘದ ಕಾರ್ಯದರ್ಶಿ ರಾಧಾ.ಎಚ್‌.ಆರ್‌.ಶಾಸಕರಿಗೆ ಮನವಿ ಸಲ್ಲಿಸಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಇದುವರೆಗೂ ಯಾವುದೇ ಸರ್ಕಾರಿ ಸವಲತ್ತು ನೀಡಿಲ್ಲ. ಮಹಿಳೆಯರ ಸಬಲೀಕರಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.

ಸಂಘದ ಅಧ್ಯಕ್ಷೆ ಸುಧಾ.ಎಚ್‌.ಎನ್‌, ಪದಾಧಿಕಾರಿಗಳಾದ ಮಂಜುಳ.ಎ.ಎಚ್‌, ರೇಣುಕಮ್ಮ, ಚಂದ್ರಮ್ಮ, ರಾಧಾ.ಆರ್‌, ಶಿಲ್ಪ.ಎಸ್‌, ರಾಧಾ.ಬಿ, ಗಂಗರಾಜಮ್ಮ, ಗಂಗಮ್ಮ, ಚಂದ್ರಮ್ಮ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)