ರಾಮನಗರ: ಮನರಂಜನಾ ತಾಣವಾದ ವಂಡರ್‌ಲಾ ರಂಜಾನ್ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಏಪ್ರಿಲ್ 11ರಿಂದ 14ರವರೆಗೆ ವಿಶೇಷ ಕೊಡುಗೆ ನೀಡಿದೆ. ಗ್ರಾಹಕರಿಗೆ ₹1,899 ಟಿಕೆಟ್‌ನೊಂದಿಗೆ ಉಚಿತವಾಗಿ ಬಿರಿಯಾನಿ ಕೊಡುಗೆಯನ್ನು ಘೋಷಿಸಿದೆ. ಆನ್‌ಲೈನ್‌ನಲ್ಲಿ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳುವ ಗ್ರಾಹಕರಿಗೆ ಮಾತ್ರ ಈ ಕೊಡುಗೆ ಸಿಗಲಿದೆ.

ಗ್ರಾಹಕರು ಟಿಕೆಟ್ ಕಾಯ್ದಿರಿಸಲು ಏಪ್ರಿಲ್ 3ರಿಂದಲೇ ಅವಕಾಶ ಕಲ್ಪಿಸಬೇಕಾಗಿದೆ. ವಿದ್ಯಾರ್ಥಿಗಳಿಗೂ ಹಾಲ್ ಟಿಕೆಟ್ ಕೊಡುಗೆ ನೀಡುತ್ತಿದೆ. 2023-2024 ಶೈಕ್ಷಣಿಕ ವರ್ಷದ 10ನೇ, 11ನೇ ಮತ್ತು 12ನೇ ತರಗತಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಈ ಕೊಡುಗೆ ಲಭ್ಯ. ತಮ್ಮ ಪರೀಕ್ಷೆಯ ಹಾಲ್ ಟಿಕೆಟ್ ಅನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರೆ ಪ್ರವೇಶ ಟಿಕೆಟ್ ಶೇ 35ರಷ್ಟು ರಿಯಾಯಿತಿ ಪಡೆಯಬಹುದು. ಈ ಕೊಡುಗೆ ಆನ್‍ಲೈನ್ ಮತ್ತು ಆಫ್‍ಲೈನ್‌ನಲ್ಲೂ ಲಭ್ಯ.

ಬೆಂಗಳೂರು ಕಾಲೇಜು ವಿದ್ಯಾರ್ಥಿಗಳಿಗೆ ಏಪ್ರಿಲ್ 6ರಿಂದಲೇ ವಿಶೇಷ ಕಾಂಬೊ ಕೊಡುಗೆ ಘೋಷಿಸಿದೆ. ₹1,550ಕ್ಕೆ ಶುರುವಾಗುವ ಕೊಡುಗೆಯು ವಿಶೇಷ ಆಹಾರದೊಂದಿಗೆ ಪಾರ್ಕ್ ಪ್ರವೇಶ ಕೂಡ ಒಳಗೊಂಡಿರಲಿದೆ. ಇದು ಆನ್‍ಲೈನ್ ಮತ್ತು ಆಫ್‍ಲೈನ್ ಬುಕಿಂಗ್‍ಗಳಲ್ಲಿ ಲಭ್ಯವಿದೆ. 16ರಿಂದ 24 ವರ್ಷದೊಳಗಿನ ವಯಸ್ಸಿನ ವಿದ್ಯಾರ್ಥಿಗಳು ಈ ಕೊಡುಗೆಗೆ ಅರ್ಹರು ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕ ಸಂಖ್ಯೆ: 80372 30333, 80350 73966.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.