ಚನ್ನಪಟ್ಟಣ: ತಾಲ್ಲೂಕಿನ ಲಾಳಾಘಟ್ಟ ಗ್ರಾಮದ ವಕೀಲೆ ಎಸ್.ಪ್ರಭಾವತಿ ತಮ್ಮ 25ನೇ ವಯಸ್ಸಿಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಅತಿ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಶ್ರದ್ಧೆ, ಛಲ, ಏಕಾಗ್ರತೆ, ಕಠಿಣ ಪರಿಶ್ರಮ ಇದ್ದರೆ ಸಾಧನೆಗೆ ಬಡತನ ಎಂದೂ ಅಡ್ಡಿಯಾಗುವುದಿಲ್ಲ ಎಂದು ತೋರಿಸುವ ಮೂಲಕ ಪೋಷಕರಿಗೂ ಕೀರ್ತಿ ತಂದಿದ್ದಾರೆ. ಕಾನೂನು ಪದವಿ ಮುಗಿಸಿ ಬೆಂಗಳೂರಿನಲ್ಲಿ ವಕೀಲೆಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, 2025 ಫೆಬ್ರವರಿಯಲ್ಲಿ ನ್ಯಾಯಾಧೀಶರ ಪರೀಕ್ಷೆ ತೆಗೆದುಕೊಂಡು 81ನೇ ರ್ಯಾಂಕ್ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ್ದಾರೆ.

ಎಸ್.ಪ್ರಭಾವತಿ ಲಾಳಾಘಟ್ಟ ಗ್ರಾಮದ ತಮಿಳು ಕಾಲೊನಿ ಪಂಚಾಮೃತ ಮತ್ತು ಸುಬ್ರಹ್ಮಣ್ಯ ದಂಪತಿ ಪುತ್ರಿ. ಕಳೆದ 50 ವರ್ಷಗಳಿಂದ ಚನ್ನಪಟ್ಟಣ ತಾಲ್ಲೂಕಿನಲ್ಲಿ ಅವರ ಪೋಷಕರು ನಗರಸಭೆ ಸೇರಿದಂತೆ ಇತರ ಸಂಸ್ಥೆಗಳು ಹಾಗೂ ಖಾಸಗಿಯವರು ನಡೆಸುವ ಚರಂಡಿ ನಿರ್ಮಾಣ ಮತ್ತು ಕ್ಲೀನಿಂಗ್ ಗುತ್ತಿಗೆ ಪಡೆದವರ ಬಳಿ ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಬಡತನದ ನಡುವೆಯೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಗಳ ಸಾಧನೆಗೆ ದಂಪತಿ ಮುನ್ನುಡಿ ಬರೆದಿದ್ದಾರೆ.

ಮೊದಲ ಮಗಳಿಗೆ ವಿವಾಹ ಮಾಡಿರುವ ದಂಪತಿ, ಎರಡನೆ ಮಗಳು ಪ್ರಭಾವತಿ ಅವರಿಗೆ ಎಲ್ಎಲ್ಬಿ ಶಿಕ್ಷಣ ಕೊಡಿಸಿ ವಕೀಲರನ್ನಾಗಿ ಮಾಡಿದ್ದರು. ಮಗ ಮುನಿರಾಜು ಸಹ ಅಂತಿಮ ವರ್ಷದ ಎಲ್ಎಲ್ಬಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಬಡತನ ಎಂದೂ ಅಡ್ಡಿ ಆಗದಂತೆ ನೋಡಿಕೊಂಡ ಪೋಷಕರ ಆಸೆ ಈಗ ಈಡೇರಿದಂತಾಗಿದೆ.

ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ: ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಪ್ರಭಾವತಿ, ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಲಾಳಾಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಂತರ ಅದೇ ಗ್ರಾಮದ ಶ್ರೀಶರಣ ಚನ್ನಪ್ಪಸ್ವಾಮಿ ಅನುದಾನಿತ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಕೆಂಗಲ್ನ ಶ್ರೀಮತಿ ಅನಸೂಯಮ್ಮ ನಂಜಪ್ಪ ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು.

ಚನ್ನಪಟ್ಟಣ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು ನಂತರ ಹಾಸನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುವ ಮಂದಿ ನಡುವೆ ಸರ್ಕಾರಿ ಹಾಗೂ ಅನುದಾನಿತ ಶಾಲೆ, ಕಾಲೇಜಿನಲ್ಲಿ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಿದ ಇವರು ಎಲ್ಲರಿಗೂ ಮಾದರಿ.

‘ನಾವು ಕೂಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಮಕ್ಕಳು ನಮ್ಮಂತೆ ಆಗುವುದು ಬೇಡ. ಉನ್ನತ ಸಾಧನೆ ಮಾಡಲಿ ಎಂಬ ಆಶಯದೊಂದಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇವೆ’ ಎಂದು ಅವರ ಪೋಷಕರು ಮಗಳ ಸಾಧನೆಯನ್ನು ಕೊಂಡಾಡಿದರು.

ಪೋಷಕರ ಆಸೆ ಈಡೇರಿದೆ

‘ಪೋಷಕರ ಆಸೆ ಈಡೇರಿಸುವುದು ಮಕ್ಕಳ ಕರ್ತವ್ಯ. ಬಡತನದ ನಡುವೆಯೂ ನಮ್ಮ ತಂದೆ–ತಾಯಿ ಶಿಕ್ಷಣ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಉನ್ನತ ಸ್ಥಾನ ಪಡೆದಿರುವುದು ಸಂತಸ ತಂದಿದೆ. ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು.' ಎಸ್.ಪ್ರಭಾವತಿ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಅಭ್ಯರ್ಥಿ ಚನ್ನಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.