ಮಾಗಡಿ: ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಡಿಮೆ ತೂಕ ಮತ್ತು ಕಳ ಪೆಯಿಂದ ಕೂಡಿರುವ ದೋಷ ಪೂರಿತ ಆಹಾರ ಸರಬರಾಜು ಮಾಡುತ್ತಿ ರುವವರ ವಿರುದ್ಧ ಕೇಸು ದಾಖಲಿಸು ವಂತೆ ತಾ.ಪಂ. ಹಿರಿಯ ಸದಸ್ಯ ಜಿ.ವಿ.ರಾಮಣ್ಣ ಆಗ್ರಹ ಪಡಿಸಿ ದರು.
ಅವರು ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತ ನಾಡಿದರು.

ತಾಲ್ಲೂಕಿನಲ್ಲಿ ಇರುವ ಅಂಗನ ವಾಡಿ ಕೇಂದ್ರಗಳಿಗೆ ಒದಗಿಸುತ್ತಿರುವ ಆಹಾರದಲ್ಲಿ ಹುಳುಗಳಿವೆ. ಗುಣಮಟ್ಟ ಸಹ ಸರಿಯಿಲ್ಲ. ಮುಗ್ಧ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಿ ಹಣ ಮಾಡುವ ದಲ್ಲಾಳಿಗಳಿಗೆ ತಕ್ಕ ಶಿಕ್ಷೆ ಯಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿ ರುವ ಕಡಲೆ ಬೀಜ ಮತ್ತು ಬೆಲ್ಲದ ಕವರುಗಳನ್ನು ಅವರು ಪ್ರದರ್ಶಿಸಿ ಪೊಟ್ಟಣಗಳಲ್ಲಿ ಹುಳುಗಳಿರುವುದನ್ನು ತೋರಿಸಿದರು. ಎಲ್ಲಾ ಸದಸ್ಯರು ಜಿ.ವಿ.ರಾಮಣ್ಣ ಅವರ ದೂರನ್ನು ಬೆಂಬಲಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ.ಕೃಷ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾ ಖೆಯ ದಾದಿಯರು ಮತ್ತು ಆರೋಗ್ಯ ಸಹಾಯಕರು ಕೆಲಸ ಮಾಡುವ ಗ್ರಾಮಗಳಲ್ಲಿಯೇ ವಾಸಿಸಬೇಕಿದೆ. ಇಲ್ಲವಾದಲ್ಲಿ ಸಂಬಳ ಕಡಿತ ಗೊಳಿಸ ಲಾಗುವುದು ಎಂದು ಎಚ್ಚರಿಸಿದರು.

ತಾ.ಪಂ.ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ತಾ.ಪಂ.ಇಒ ಕೆ.ಬಿ.ಅಕ್ಕೋಜಿ, ತಾ.ಪಂ. ಸದಸ್ಯರಾದ ಎಂ.ರಾಮಣ್ಣ, ಎಸ್.ಕಾಂತರಾಜು ಇತರರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.