ಶನಿವಾರ, ಜನವರಿ 18, 2020
20 °C
ವದಂತಿ ನಿರಾಕರಿಸಿದ ವನ್ಯಜೀವಿ ವಿಭಾಗದ ಅಧಿಕಾರಿಗಳು

ಸೆರೆ ಹಿಡಿದ ಆನೆ ಭದ್ರಾ ಅಭಯಾರಣ್ಯಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಬಳಿ ಸೆರೆಹಿಡಿದು ಸಕ್ರೆಬೈಲಿನ ಬಿಡಾರಕ್ಕೆ ತಂದಿದ್ದ 22 ವರ್ಷದ ಆನೆಯನ್ನು ಭದ್ರಾ ಅಭಯಾರಣ್ಯಕ್ಕೆ ಬಿಡಲು ವನ್ಯಜೀವಿ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಆನೆ ಸೌಮ್ಯ ಸ್ವಭಾವ ಹೊಂದಿದೆ. ಜೋಗಿಮಟ್ಟಿ ಪ್ರದೇಶದಲ್ಲಿ ಸೆರೆ ಹಿಡಿಯುವ ಮೊದಲೂ ಯಾವುದೇ ಜೀವ ಹಾನಿ ನಡೆಸಿಲ್ಲ. ಬೆಳೆಹಾನಿ ಮಾಡುತ್ತಿದೆ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸೆರೆ ಹಿಡಿದಿದ್ದರು. ಬಿಡಾರಕ್ಕೆ ಬಂದ ನಂತರವೂ ಸೌಮ್ಯ ವರ್ತನೆ ತೋರಿದೆ. ಅಕ್ರಮಣಕಾರಿಯಾಗಿ ವರ್ತಿಸಿಲ್ಲ. ಸಕ್ರೆಬೈಲ್‌ ಆನೆ ಬಿಡಾರದಲ್ಲಿ ಪ್ರಸ್ತುತ 25 ಆನೆಗಳಿವೆ. ಹೈಕೋರ್ಟ್‌ ನಿರ್ದೇಶನದಂತೆ ಯಾವುದೇ ಬಿಡಾರದಲ್ಲಿ 15ಕ್ಕಿಂತ ಹೆಚ್ಚು ಆನೆಗಳು ಇರುವಂತಿಲ್ಲ. ಈ ಎಲ್ಲ ಕಾರಣಗಳಿಂದ ಆನೆಯನ್ನು ಮತ್ತೆ ಕಾಡಿಗೇ ಬಿಡಲಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ. 

ಆನೆ ಕೊರಳಿಗೆ ರೇಡಿಯೊ ಕಾಲರ್‌ ಅಳವಡಿಸಿ, ಮೊಬೈಲ್‌ ತಂತ್ರಾಂಶದ ಮೂಲಕ ಅದರ ಚಲನವಲನಗಳ ಮೇಲೆ ನಿಗಾವಹಿಸಲು ಆಲೋಚಿಸಲಾಗಿದೆ. ಆನೆ ಯಾವುದೇ ಪ್ರದೇಶದಲ್ಲಿ ಇದ್ದರೂ ಪತ್ತೆ ಹಚ್ಚಬಹುದು. ಜನನಿಬಿಡ ಪ್ರದೇಶಗಳತ್ತ ಸಾಗಿದರೂ ತಕ್ಷಣ ಮಾಹಿತಿ ದೊರೆಯುತ್ತದೆ ಎನ್ನಲಾಗಿದೆ. 

‘ಸೆರೆ ಹಿಡಿದ ಆನೆಯನ್ನು ಮತ್ತೆ ಕಾಡಿಗೆ ಬಿಡುವ ಯಾವುದೇ ಪ್ರಸ್ತಾವ ಇಲಾಖೆಯ ಮುಂದಿಲ್ಲ. ಮೇಲಧಿಕಾರಿಗಳಿಂದ ಆದೇಶ ಬಂದರಷ್ಟೇ ಪರಿಶೀಲಿಸಲಾಗುವುದು. ಒಮ್ಮೆ ಹಿಡಿದ ಆನೆಯನ್ನು ಮತ್ತೆ ಕಾಡಿಗೆ ಬಿಟ್ಟ ಉದಾಹರಣೆಯೇ ಇಲ್ಲ’ ಎನ್ನುತ್ತಾರೆ ವನ್ಯಜೀವಿ ವಿಭಾಗದ ಡಿಎಫ್‌ಒ ಐ.ಎಂ.ನಾಗರಾಜ್.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು