ಶುಕ್ರವಾರ, ಜೂನ್ 25, 2021
21 °C

ಶಿವಮೊಗ್ಗ: 18 ವರ್ಷ ಮೇಲ್ಪಟ್ಟ 300 ಜನರಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳು ಹಾಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮಂಗಳವಾರ ಲಸಿಕೆ ನೀಡಲಾಯಿತು.

ಮೊದಲೇ ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿಕೊಂಡ 300 ಜನರು ಲಸಿಕೆ ಪಡೆದರು. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಬಹುತೇಕರು ಸರದಿಯಲ್ಲಿ ನಿಂತು ಲಸಿಕೆ ಪಡೆದರು. ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯ ದಾಸ್ತಾನು ಲಭ್ಯವಿಲ್ಲದ ಕಾರಣ ಸ್ವಲ್ಪ ಜನರಿಗಷ್ಟೆ ಲಸಿಕೆ ದೊರೆಯಿತು. ಹಲವರು ಲಸಿಕೆ ಹಾಕಿಸಿಕೊಳ್ಳದೆ ಮನೆಗೆ ಮರಳಿದರು.

ಕುವೆಂಪು ರಸ್ತೆಯ ಜಿಲ್ಲಾ ತರಬೇತಿ ಕೇಂದ್ರ, ನಗರ ಆರೋಗ್ಯ ಕೇಂದ್ರಗಳಲ್ಲಿ ಎರಡನೇ ಡೋಸ್‌ ಪಡೆಯುವವರಿಗೆ ಮಾತ್ರ ಲಸಿಕೆ ನೀಡಲಾಯಿತು. ಮೊದಲ ಲಸಿಕೆ ಪಡೆಯುವ 45 ಮೆಲ್ಪಟ್ಟವರಿಗೂ ಲಸಿಕೆ ದೊರಕಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು