ಶನಿವಾರ, ಅಕ್ಟೋಬರ್ 24, 2020
27 °C
3627 ಜನರ ವರದಿ ನೆಗೆಟಿವ್

344 ಮಂದಿಗೆ ಸೋಂಕು 326 ಜನರು ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 4012 ಜನರ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದ್ದು, 3627 ಜನರ ವರದಿ ನೆಗೆಟಿವ್ ಬಂದಿದೆ. 344 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 326 ಮಂದಿ ಗುಣಮುಖರಾಗಿದ್ದಾರೆ. 4 ಜನ ಮೃತಪಟ್ಟಿದ್ದಾರೆ. 

ಮನೆಯಲ್ಲಿ 1,212 ಸೇರಿ ಒಟ್ಟು 2023 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಕೋವಿಡ್‌-19ನಿಂದ ಮೃತಪಟ್ಟವರ ಸಂಖ್ಯೆ 293ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 15,839ಕ್ಕೆ ತಲುಪಿದೆ.

ಶಿವಮೊಗ್ಗ ತಾಲ್ಲೂಕಿನಲ್ಲಿ 133 ಸೋಂಕಿತರು ಪತ್ತೆಯಾಗಿದ್ದಾರೆ. ಭದ್ರಾವತಿಯಲ್ಲಿ 27, ಶಿಕಾರಿಪುರದಲ್ಲಿ 52, ತೀರ್ಥಹಳ್ಳಿಯಲ್ಲಿ 33, ಸೊರಬ 46, ಸಾಗರದಲ್ಲಿ 19, ಹೊಸನಗರದಲ್ಲಿ 31 ಹಾಗೂ ಇತರೆ ಜಿಲ್ಲೆಗಳಿಂದ ಚಿಕಿತ್ಸೆಗೆ ಬಂದಿದ್ದ ಮೂವರಲ್ಲಿ ಸೋಂಕು ಖಚಿತಪಟ್ಟಿದೆ.

19 ಜನರಿಗೆ ಕೊರೊನಾ
ಸಾಗರ ವರದಿ:
ತಾಲ್ಲೂಕಿನಲ್ಲಿ ಬುಧವಾರ 19 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಗ್ರಾಮಾಂತರದಲ್ಲಿ 14, ನಗರ ವ್ಯಾಪ್ತಿಯಲ್ಲಿ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ 739 ಕ್ಕೇರಿದ್ದು 450 ಮಂದಿ ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು