ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾಳಕೊಪ್ಪ | 9 ತಿಂಗಳ ಮಗು ಸಾವು: ಡೆಂಗಿ ಶಂಕೆ

Published 8 ಜುಲೈ 2024, 17:27 IST
Last Updated 8 ಜುಲೈ 2024, 17:27 IST
ಅಕ್ಷರ ಗಾತ್ರ

ಶಿರಾಳಕೊಪ್ಪ: 9 ತಿಂಗಳ ಮಗುವೊಂದು ಕಳೆದ ಶನಿವಾರ ಶಿವಮೊಗ್ಗದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಡೆಂಗಿ ಶಂಕೆ ವ್ಯಕ್ತವಾಗಿದೆ.

ಪಟ್ಟಣದ ಕಾನಕೇರಿಯ ನಿವಾಸಿ ಖಾನಿ ಜಾವೇದ್ ಅವರ ಗಂಡು ಮಗು ಕೌಸೇನ್‌ನನ್ನು ತೀವ್ರ ಜ್ವರದ
ಕಾರಣ ಕಳೆದ ವಾರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಡೆಂಗಿ ಲಕ್ಷಣಗಳಿದ್ದವು ಎಂದು ಪಾಲಕರು ಹೇಳಿದ್ದು, ತಾಲ್ಲೂಕು ವೈದ್ಯಾಧಿಕಾರಿ ಅದನ್ನು ಖಚಿತಪಡಿಸಿಲ್ಲ.

‘ಮಗುವಿಗೆ ಡೆಂಗಿ ಇರಬಹುದು ಎಂದೇ ಆಸ್ಪತ್ರೆಗೆ ಸೇರಿಸಿದ್ದೆವು. ಶನಿವಾರ ಮೃತಪಟ್ಟಿದೆ’ ಎಂದು ಖಾನಿ ಜಾವಿದ್ ತಿಳಿಸಿದರು.

‘ಡೆಂಗಿಯಿಂದ ಮಗು ಮೃತಪಟ್ಟಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ನವೀದ್ ಖಾನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT