ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫಲಾನುಭವಿಗಳು ಆಧಾರ್ ಅಪ್ಡೇಟ್ ಮಾಡಿಸಿ; ಡಿಸಿ ಸೂಚನೆ

-
Published 5 ಸೆಪ್ಟೆಂಬರ್ 2024, 16:06 IST
Last Updated 5 ಸೆಪ್ಟೆಂಬರ್ 2024, 16:06 IST
ಅಕ್ಷರ ಗಾತ್ರ

ಶಿವಮೊಗ್ಗ:   ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳಾದ ವೃದ್ದಾಪ್ಯ ಯೋಜನೆ, ವಿಧವಾ ಯೋಜನೆ, ಅಂಗವಿಕಲ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆಗಳ ಮಾಸಿಕ ಪಿಂಚಣಿಯನ್ನು ಫಲಾನುಭವಿಗಳಿಗೆ ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆ (ಡಿಬಿಟಿ) ಮೂಲಕ ಪಾವತಿಸುತ್ತಿದೆ.

ಆಧಾರ್ ಡೃಢೀಕರಣ ವಿಫಲವಾದ 2937 ಫಲಾನುಭವಿಗಳು ಮತ್ತು ಹೆಸರು ಹೊಂದಾಣಿಕೆ ಇರುದ 21 ಫಲಾನುಭವಿಗಳಿಗೆ ಕಳೆದ ಮಾರ್ಚ್-2024 ರಿಂದ ಮಾಸಿಕ ಪಿಂಚಣಿ ಸಂದಾಯವಾಗಿರುವುದಿಲ್ಲ. ಮಾಸಿಕ ಪಿಂಚಣಿ ಸಂದಾಯವಾಗದೇ ಇರುವ ಫಲಾನುಭವಿಗಳು ಕೂಡಲೇ ಮಂಜೂರಾತಿ ಆದೇಶ ಪತ್ರ, ಆಧಾರ್ ಕಾರ್ಡ್, ಪಾಸ್ ಪುಸ್ತಕ ಮತ್ತು ಎನ್.ಪಿ.ಸಿ.ಐ. ಮ್ಯಾಪಿಂಗ್ ಆಗಿರುವುದರ ಪ್ರತಿಯೊಂದಿಗೆ ಸಂಬಂಧಿಸಿದ ತಾಲ್ಲೂಕು ಕಚೇರಿ/ನಾಡ ಕಚೇರಿಗೆ ಭೇಟಿ ನೀಡಿ ಆಧಾರ್ ಅಪ್ ಡೇಟ್ ಮಾಡಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT