ಭಾನುವಾರ, ಮೇ 29, 2022
24 °C

ಕಡವೆ ಮರಿ ಸುಟ್ಟ ಆರೋಪ: ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಊರಿಗೆ ಬಂದ ಕಡವೆ ರಕ್ಷಿಸದೆ ಸಾವಿಗೆ ಕಾರಣವಾದ ಪ್ರಕರಣ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಮರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ತಾಯಿಯಿಂದ ಬೇರ್ಪಟ್ಟು ಭಯದಿಂದ ದಿಕ್ಕು ತಪ್ಪಿ ಊರಿಗೆ ಬಂದ ಕಡವೆ ಮರಿಯನ್ನು ಉಪಚರಿಸಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಉಪ ವಲಯಾರಣ್ಯಧಿಕಾರಿ ಸ್ಥಳಕ್ಕೆ ಬಂದು, ‘ಕಡವೆ ಮರಿಯನ್ನು ಹಗ್ಗದಲ್ಲಿ ಕಟ್ಟಿಹಾಕಿ ಗ್ರಾಮಸ್ಥರು ಇನ್ನು ರಕ್ಷಣೆ ಮಾಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ನೋಡಿಕೊಳ್ಳುತ್ತದೆ. ಈ ಬಗ್ಗೆ ಗ್ರಾಮಸ್ಥರು ನಿಗಾ ಬೇಕಿಲ್ಲ’ ಎಂದು ಸೂಚಿಸಿದರು.

ಕಾಡಿನಲ್ಲಿ ತಾಯಿ ಕಡವೆಯ ಕೂಗು ಕೇಳಿಸಿದ್ದು ಕಾಡಿಗೆ ಕಡವೆ ಮರಿ ಮರಳಿ ಬಿಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಉಪ ವಲಯಾರಣ್ಯಧಿಕಾರಿ ಒಪ್ಪಲಿಲ್ಲ. ಇಡೀ ರಾತ್ರಿ ಕಡವೆ ಮರಿ ನರಳಿ ಬೆಳಗಾಗುವ ಮುನ್ನ ಪ್ರಾಣ ಬಿಟ್ಟಿದೆ.

ಉಪ ವಲಯಾರಣ್ಯಧಿಕಾರಿ ಕರ್ತವ್ಯದಲ್ಲಿ ತೋರಿದ ನಿರ್ಲಕ್ಷ್ಯ ಕಡವೆ ಮರಿ ಸಾವಿಗೆ ಕಾರಣವಾಗಿದೆ. ಮೃತ ಕಡವೆ ಮರಿ ದೇಹದ ಕುರಿತು ಕಾನೂನಿನ ಅನ್ವಯ ಮಹಜರ್‌ ನಡೆಸದೇ ಸುಟ್ಟು ಹಾಕಿರುವ ಕುರಿತು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.