ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಎಪಿಎಂಸಿ ಕಾಯ್ದೆಗೆ ವಿರೋಧ: ವಹಿವಾಟು ಸಂಪೂರ್ಣ ಸ್ಥಗಿತ

Last Updated 13 ಜುಲೈ 2020, 11:53 IST
ಅಕ್ಷರ ಗಾತ್ರ

ಶಿವಮೊಗ್ಗ: ಮಾರುಕಟ್ಟೆಯ ಹೊರಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ, ಮಾರುಕಟ್ಟೆಯ ಒಳಗೆಸೆಸ್‌ ಸಂಗ್ರಹ ವಿರೋಧಿಸಿ ಎಪಿಎಂಸಿ ವರ್ತಕರು ಜುಲೈ 13ರಿಂದ ಅನಿರ್ದಿಷ್ಟಾವಧಿವರೆಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಸರ್ಕಾರದ ಹೊಸ ಕಾನೂನಿನ ಪ್ರಕಾರ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಎಪಿಎಂಸಿ ಆವರಣದ ಹೊರಗೆ ಉತ್ಪನ್ನಗಳನ್ನು ಖರೀದಿಸುವ ವರ್ತಕರು ಯಾವುದೇ ಮಾರುಕಟ್ಟೆ ಶುಲ್ಕ ಪಾವತಿಸುವಂತಿಲ್ಲ. ಒಳಗೆ ನಡೆಯುವ ವ್ಯಾಪಾರಕ್ಕೆ ವರ್ತಕರು ಶೇ 1ರಷ್ಟು ಸೆಸ್‌ ಕಟ್ಟಬೇಕು. ಈ ತಾರತಮ್ಯ ವಿರೋಧಿಸಿ ಎಪಿಎಂಸಿ ಪ್ರಾಂಗಣದಲ್ಲಿ ಅಡಿಕೆ ಸೇರಿದಂತೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳ ಮಾರಾಟವನ್ನೂಸ್ಥಗಿತಗೊಳಿಸಲಾಗುತ್ತಿದೆಎಂದು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರ್ಕಾರಇಂತಹನಿರ್ಧಾರವಾಪಸ್‌ ಪಡೆಯಬೇಕು. ಎಪಿಎಂಸಿ ಒಳಗೆ, ಹೊರಗೆ ಏಕರೂಪ ಶುಲ್ಕ ವಿಧಿಸಬೇಕು. ಹೊಸ ಕಾನೂನಿನಿಂದ ಎಪಿಎಂಸಿ ಒಳಗೆ ಇರುವ ವರ್ತಕರು ಅಪಾರ ನಷ್ಟ ಅನುಭವಿಸಲಿದ್ದಾರೆ.ಯಾವ ಟೆಂಡರ್ ಪ್ರಕ್ರಿಯೆಗಳು ಉಳಿಯುವುದಿಲ್ಲ.ಟೆಂಡರ್ ಪ್ರಕ್ರಿಯೆಯಿಂದರೈತರಿಗೆ ಉತ್ತಮ ಧಾರಣೆ ಸಿಗುತ್ತದೆ.ಟೆಂಡರ್ ಪ್ರಕ್ರಿಯೆ ಉಳಿದರೆ ಮಾರುಕಟ್ಟೆ ಉಳಿಯುತ್ತದೆ. ರೈತರು, ದಳ್ಳಾಳಿಗಳು, ಕಾರ್ಮಿಕರು ಅವರ ಕುಟುಂಬಗಳು ಉಳಿಯುತ್ತವೆ. ಎಪಿಎಂಸಿ ವ್ಯವಸ್ಥೆಯೇ ಹದಗೆಡುತ್ತದೆ. ಸಂಪೂರ್ಣ ಮುಚ್ಚಿಹೋಗುವ ಅಪಾಯವಿದೆ ಎಂದುಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಇಂದಿನಿಂದಲೇ ಎಲ್ಲ ರೀತಿಯ ವ್ಯಾಪಾರವನ್ನು ಬಂದ್ ಮಾಡಲಾಗುತ್ತಿದೆ. ಸಾಗರ, ಚನ್ನಗಿರಿ, ಭೀಮಸಮುದ್ರ ಸೇರಿದಂತೆ ರಾಜ್ಯದ ಎಲ್ಲ ಎಪಿಎಂಸಿಗಳಲ್ಲೂ ವಹಿವಾಟು ಸ್ಥಗಿತಗೊಳಿಸಲಿವೆ ಎಂದರು.

ಶಿವಮೊಗ್ಗದಲ್ಲಿ ಸುಮಾರು 300ಕ್ಕೂ ಹೆಚ್ಚು ಅಡಿಕೆ ವರ್ತಕರಿದ್ದಾರೆ. ವರ್ಷಕ್ಕೆ 2 ಸಾವಿರ ಕೋಟಿ ವ್ಯವಹಾರವಾಗುತ್ತದೆ.₨ 35 ಕೋಟಿ ಸೆಸ್‌ಸಲ್ಲಿಸಲಾಗುತ್ತಿದೆ. ಇಂದಿನ ಅಡಿಕೆ ಧಾರಣೆ ಪ್ರಕಾರ ಒಂದು ಲೋಡ್ ಅಡಿಕೆಗೆ ಎಪಿಎಂಸಿ ಒಳಗೆ ವ್ಯಾಪಾರ ಮಾಡುವ ವರ್ತಕರು ₹ 1 ಲಕ್ಷ ಮಾರುಕಟ್ಟೆ ಶುಲ್ಕ ಪಾವತಿಸಬೇಕು. ಹೊರಗೆ ಖರೀದಿಸಿದರೆ ₹ ಲಕ್ಷ ಶುಲ್ಕ ಉಳಿಯುತ್ತದೆ. ಇದು ಅಸಂಬದ್ಧ.ಜಿಎಸ್‍ಟಿ ಕೂಡ ಕಡಿಮೆಯಾಗಿ ಸರ್ಕಾರಕ್ಕೆ ನಷ್ಟವಾಗುತ್ತದೆಎಂದು ಎಚ್ಚರಿಸಿದರು.

ಅಡಿಕೆ ವರ್ತಕರ ಸಂಘದ ತೀರ್ಮಾನಕ್ಕೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ್ಬೆಂಬಲ ಸೂಚಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ಸಿ.ಮಲ್ಲಿಕಾರ್ಜುನ್, ಸಹ ಕಾರ್ಯದರ್ಶಿ ಕೆ.ಜಿ.ಪಂಚಾಕ್ಷರಪ್ಪ, ವಿಜಯಕುಮಾರ್, ಅನುಪ್ರಸಾದ್, ಗೋಪಿನಾಥ್, ಓಂಕಾರಪ್ಪ, ತಮ್ಮಡಿಹಳ್ಳಿ ನಾಗರಾಜ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT