ಶುಕ್ರವಾರ, ಜೂನ್ 5, 2020
27 °C
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಒತ್ತಾಯ

ಅಸಂಘಟಿತರ ನೆರವಿಗೆ ಮತ್ತೊಂದು ಪ್ಯಾಕೇಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನೋಂದಾಯಿಸದ, ತೆರೆ ಮರೆಯಲ್ಲೇ ದುಡಿಯುವ ಅಸಂಘಟಿತ ಕಾರ್ಮಿಕರಿಗೂ ಸರ್ಕಾರ ನೆರವಾಗಬೇಕು. ಹೆಚ್ಚುವರಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಆಯನೂರು ಮಂಜುನಾಥ್‌ ಒತ್ತಾಯಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಮಾರು 1,610 ಕೋಟಿ ರು. ಪ್ಯಾಕೇಜ್‌ ಘೋಷಿಸುವ ಮೂಲಕ ಕಾರ್ಮಿಕರ, ರೈತರ ನೆರವಿಗೆ ನಿಂತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಜತೆಗೆ, ಹಲವು ಸಣ್ಣಪುಟ್ಟ ಬಡ ಕುಟುಂಬಗಳು, ಲೆಕ್ಕಕ್ಕೆ ಸಿಗದ ಅಸಂಘಟಿತ ಕಾರ್ಮಿಕರು ಇದ್ದಾರೆ. ಅಂಥ ವರ್ಗಗಳನ್ನು ಗುರುತಿಸಬೇಕು. ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಶ್ರೀಮಂತರ ಮನೆಗಳಲ್ಲಿ  ಕಸ, ಮುಸುರೆ ಕೆಲಸ ಮಾಡುವ ಹೆಣ್ಣು ಮಕ್ಕಳು, ಟೈಲರ್‌ಗಳು, ಹಮಾಲರು, ಚಿನ್ನ ಬೆಳ್ಳಿ ಕೆಲಸ ಮಾಡುವವರು, ನೋಂದಾಯಿಸದ ಕ್ಷೌರಿಕರು, ಕುಂಬಾರರು ನಿತ್ಯದ ದುಡಿಮೆ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದರು. ಈಗ ಕೆಲಸ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. 
ಎಪಿಎಂಸಿಯಲ್ಲೂ ನೋಂದಾಯಿಸದ ಹಮಾಲರು, ತೂಕ ಮಾಡುವವರು, ದಿನಗೂಲಿ ಕೆಲಸ ಮಾಡುವವರು ಇದ್ದಾರೆ. ಅವರೆಲ್ಲರಿಗೂ ಆಯಾ ಎಪಿಎಂಸಿಗಳೇ ಹಣದ ನೆರವು ನೀಡುವಂತೆ ನಿರ್ದೇಶನ ನೀಡಬೇಕು. ಸಚಿವರು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ವಲಸೆ ಕಾರ್ಮಿಕರು ಈಗಾಗಲೇ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸುಮಾರು 80 ಲಕ್ಷ  ಜನರು ಮೂಲ ಸ್ಥಳಗಳಿಗೆ ಹಿಂದಿರುಗಿದ್ದಾರೆ. ಆದರೂ, ಸರ್ಕಾರ ನೀಡಿದ ಕಿಟ್‌ಗಳು  ಅಷ್ಟೇ ಪ್ರಮಾಣದಲ್ಲಿ ಖರ್ಚಾಗುತ್ತಿವೆ. ಆಹಾರ ಪದಾರ್ಥಗಳ ಕಿಟ್‌ ದುರುಪಯೋಗವಾಗುತ್ತಿವೆ. ನಿಜವಾದ ಫಲಾನುಭವಿಗಳಿಗೆ ತಲುಪಲು ಕ್ರಮ ಕೈಗೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ರವಿ, ಸುಬ್ರಮಣ್ಯ, ಈಶ್ವರಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು