ಶಿವಮೊಗ್ಗ: ಇಲ್ಲಿನ ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆರಂಭವಾದ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕೆ ಮೇಳದ ಮೊದಲ ದಿನ ವಿಶ್ವವಿದ್ಯಾಲಯ ವ್ಯಾಪ್ತಿಯ ಏಳು ಜಿಲ್ಲೆಗಳ 14 ಮಂದಿ ಪ್ರಗತಿಪರ ಕೃಷಿಕರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅತ್ಯುತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದರು.

ಶಿವಮೊಗ್ಗ ತಾಲ್ಲೂಕಿನ ಲಕ್ಷ್ಮೀಪುರದ ವೈ.ಕೆ.ಮಹೇಶ್ವರ, ಸೊರಬ ತಾಲ್ಲೂಕಿನ ಚಂದ್ರಗುತ್ತಿ ಹೊರಬೈಲಿನ ಲಲಿತಮ್ಮ ಈರಪ್ಪ ನಾಯಕ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿಯ ಸಿದ್ದೇಶ್ವರ ರೆಡ್ಡಿ, ಹಿರಿಯೂರು ತಾಲ್ಲೂಕು ವಾಣಿವಿಲಾಸ ಪುರದ ಸೂರ್ಯ ಶಂಕರ್, ದಾವಣಗೆರೆ ಜಿಲ್ಲೆ ಕುಕ್ಕುವಾಡದ ಜಿ.ಎಂ.ಮಂಜುನಾಥ, ಚನ್ನಗಿರಿ ತಾಲ್ಲೂಕು ತಿಮ್ಮೇನಹಳ್ಳಿಯ ಎಸ್.ಮಂಜುಳಾ ದೇವಿ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಮೈದನಮಕ್ಕಿ ಅಂಚೆ ಕೂವೆಯ ಎಂ.ಎಸ್.ಆಸ್ತಿಕ್, ಕಡೂರು ತಾಲ್ಲೂಕು ಸಖರಾಯಪಟ್ಟಣ ಹೋಬಳಿ ಜೋಡಿ ಲಿಂಗದಹಳ್ಳಿಯ ಇಂದ್ರಮ್ಮ ಬೀರೇಗೌಡ.

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ನಾಪೋಕ್ಲು ಗ್ರಾಮದ ಪಿ.ಎ.ನಂದಕುಮಾರ್, ಪೊನ್ನಂಪೇಟೆ ತಾಲ್ಲೂಕು ಬಾಳಕೆ ಗ್ರಾಮದ ಪಂಕಜಾ ಗಿರೀಶ, ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕು ಕಲ್ತೋಡು ಗ್ರಾಮದ ರಾಮಯ್ಯ ಶೆಟ್ಟಿ, ಬ್ರಹ್ಮಾವರ ತಾಲ್ಲೂಕು ಅಲೆಯ ನಡೂರು ಗ್ರಾಮದ ಉಷಾ ಭಾಸ್ಕರ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ತಾಲ್ಲೂಕು ಪಣಪಿಲ ಗ್ರಾಮದ ರಾಜೇಶ್ ದೇವರಾಜ್ ಕೋಟಿಯಾನ್ ಹಾಗೂ ಸುಳ್ಯ ತಾಲ್ಲೂಕು ಐವರ್ನಾಡು ಗ್ರಾಮದ ಚಾತುಬಾಯಿ ಮನೆಯ ಪಿ.ವಿ.ನಮಿತಾ ಅವರಿಗೆ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ನೀಡಿ ಸಚಿವರು ಗೌರವಿಸಿದರು.

ಇದೇ ಸಂದರ್ಭದಲ್ಲಿ ಸಚಿವ ಚಲುವರಾಯಸ್ವಾಮಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕೃಷಿ ಪರಿಕರಗಳ ಉತ್ಪಾದನಾ ಘಟಕಗಳು, ವಿವಿಧ ಕೃಷಿ ಉತ್ಪನ್ನಗಳ, ಹಣ್ಣು– ಹಂಪಲುಗಳ, ಸಾವಯವ ಕೃಷಿ ಸಂಬಂಧಿತ ಪ್ರದರ್ಶನ ಮಳಿಗೆ, ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಅರಿವು ಮತ್ತು ಸಲಹೆ ನೀಡುವ ಕೇಂದ್ರಗಳನ್ನು ವೀಕ್ಷಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.