ಭದ್ರಾವತಿ: ಪ್ರೀತಿಯ ವಿಷಯದಲ್ಲಿ ನಗರದ ರಂಗಪ್ಪ ವೃತ್ತ ಸಮೀಪದ ಜೈ ಭೀಮ್ ನಗರದಲ್ಲಿ ಶುಕ್ರವಾರ ತಡ ರಾತ್ರಿಯಲ್ಲಿ ಗಲಾಟೆ ನಡೆದು ಮಾರಕಾಸ್ತ್ರಗಳಿಂದ ಇಬ್ಬರನ್ನು ಹತ್ಯೆ ಮಾಡಿರುವ ಘಟನೆಯಲ್ಲಿ ಐವರು ಆರೋಪಿಗಳನ್ನು ಹಳೇ ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಡುಗಿಯ ಅಣ್ಣ ಭರತ್ (26) , ಆತನ ಸ್ನೇಹಿತರಾದ ಮಂಜುನಾಥ್ (28 ), ವೆಂಕಟೇಶ್ (26), ಸುರೇಶ್ (25), ಹಾಗೂ ಸಂಜಯ್ (23) ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲಾ ಜೈ ಭೀಮ್ ನಗರದ ನಿವಾಸಿಗಳು.

ಹತ್ಯೆಯಾದ ಮಂಜುನಾಥ್ ಮತ್ತು ಕಿರಣ್ ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಮೃತದೇಹ ಶನಿವಾರ ಸಂಜೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಭಾನುವಾರ ಅಂತ್ಯಕ್ರಿಯೆ ನಡೆಯಲಿದ್ದು, ಪೊಲೀಸರಿಂದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಳೇ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನಿಲ್ ತಿಳಿಸಿದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.