ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮಘಟ್ಟದಲ್ಲಿ ಕಾಳಿಂಗ ಸರ್ಪದ ಸಂತತಿ ಕ್ಷೀಣ

Last Updated 9 ಸೆಪ್ಟೆಂಬರ್ 2021, 4:01 IST
ಅಕ್ಷರ ಗಾತ್ರ

ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಕಾಳಿಂಗ ಸರ್ಪದ ಸಂತತಿ ಕಡಿಮೆಯಾಗುತ್ತಿದೆ ಎಂದು ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಗೌರಿಶಂಕರ್ ಹೇಳಿದರು.

‘ಪಶ್ಚಿಮಘಟ್ಟಗಳು, ಆಂಧ್ರಪ್ರದೇಶ, ಉತ್ತರಾಖಂಡ, ಪಿಲಿಪ್ಪೀನ್ಸ್ ಹೀಗೆ ಹಲವು ಕಡೆ ಈ ಕಾಳಿಂಗ ಸರ್ಪಗಳು ಕಂಡುಬರುತ್ತವೆ. ಅಧ್ಯಯನದ ಪ್ರಕಾರ, ಸಾಮಾನ್ಯವಾಗಿ ಆಗುಂಬೆ ಹಾಗೂ ಪಶ್ಚಿಮ ಘಟ್ಟದಲ್ಲಿರುವ ಕಾಳಿಂಗ ಸರ್ಪಗಳಿಗೆ 45 ಪಟ್ಟಿಗಳು ಇದ್ದರೆ, ಆಂಧ್ರಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಕಂಡುಬರುವ ಕಾಳಿಂಗ ಸರ್ಪಗಳಿಗೆ 60 ಪಟ್ಟಿಗಳು ಇರುತ್ತದೆ. ಪಿಲಿಪ್ಪೀನ್ಸ್ ಮುಂತಾದ ದೇಶಗಳಲ್ಲಿ ಕಂಡುಬರುವ ಕಾಳಿಂಗ ಸರ್ಪಗಳಿಗೆ 70 ಪಟ್ಟಿ ಇರುತ್ತವೆ. ಭಾರತದಲ್ಲಿ ಸಾಮಾನ್ಯವಾಗಿ ಕಾಳಿಂಗ ಸರ್ಪಗಳು 15 ಅಡಿ ಉದ್ದವಿರುತ್ತವೆ. ಆದರೆ, ವಿದೇಶಗಳಲ್ಲಿ 18 ಅಡಿಗೂ ಹೆಚ್ಚು ಉದ್ದವಿರುವ ಕಾಳಿಂಗ ಸರ್ಪಗಳಿವೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಭಿವೃದ್ಧಿ ಹೆಸರಲ್ಲಿ ಕಾಡುಗಳ ವಿನಾಶದಿಂದ ಕಾಳಿಂಗ ಸರ್ಪಗಳ ಸಂತತಿ ಕೂಡ ಕಡಿಮೆಯಾಗುತ್ತಿದೆ. 25ರಿಂದ 30 ವರ್ಷಗಳ ಕಾಲ ಬದುಕುವ ಈ ಜೀವಿಗಳು ಮನುಷ್ಯನಿಗೆ ವಿನಾಕಾರಣ ತೊಂದರೆ ಕೊಡುವುದಿಲ್ಲ ಎಂದರು.

‘ನಾನು ಕಾಳಿಂಗ ಸರ್ಪಗಳ ಬಗ್ಗೆ 7 ವರ್ಷಗಳಿಂದ ಪಿಎಚ್‌.ಡಿಗಾಗಿ ಅಧ್ಯಯನ ನಡೆಸುತ್ತಿದ್ದು, ಅಧ್ಯಯನ ಮುಗಿದಿದೆ. ಇಷ್ಟರಲ್ಲಿಯೇ ಸಂಶೋಧನಾ ಪ್ರಬಂಧ ಮಂಡಿಸುತ್ತೇನೆ. ಹಲವು ಕೋನದಲ್ಲಿ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಇದರ ಡಿಎನ್ಎ ಮಾದರಿಗಳನ್ನು ತೆಗೆದುಕೊಂಡಿದ್ದೇನೆ. ಕಾಳಿಂಗ ಸರ್ಪ ಸಾಮಾನ್ಯವಾಗಿ ಕಚ್ಚುವುದಿಲ್ಲ. ಅದು ನುಂಗುತ್ತದೆ. ಕಾಳಿಂಗ ಸರ್ಪಗಳು ಅನೇಕ ಮೊಟ್ಟೆಯನ್ನು ಇಟ್ಟರೂ ಶೇ 2ರಷ್ಟು ಮಾತ್ರ ಮರಿಯಾಗಿ ಬದುಕುತ್ತವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT