ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಭಾವರಾಮಾಯಣ’ ಕೃತಿ ಲೋಕಾರ್ಪಣೆ

Published 2 ಜುಲೈ 2024, 14:13 IST
Last Updated 2 ಜುಲೈ 2024, 14:13 IST
ಅಕ್ಷರ ಗಾತ್ರ

ಹೊಸನಗರ: ರಾಮಾಯಣದ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ರಾಘವೇಶ್ವರ ಭಾರತಿ ಶ್ರೀಗಳು ಭಾವರಾಮಾಯಣ ಕೃತಿ ರಚಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹನಿಯ ರವಿ ಹೇಳಿದರು. 

ರಾಮಚಂದ್ರಾಪುರ ಮಠದಲ್ಲಿ ನಡೆದ ರಾಘವೇಶ್ವರ ಭಾರತಿ ಶ್ರೀ ರಚಿಸಿದ ಭಾವರಾಮಾಯಣ ರಾಮಾವತರಣ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಜಕ್ಕೆ ಒಳ್ಳೆಯ ವಿಷಯ ತಲುಪಿಸುವುದು ಕೃತಿಯ ಉದ್ದೇಶ. ವಾಲ್ಮೀಕಿ ರಾಮಾಯಣದ ಆಧಾರದಲ್ಲಿ ಶ್ರೀಗಳಿಂದ ರಚಿತವಾದ ಕೃತಿ ಅತ್ಯಂತ ಸರಳವಾಗಿ ಮೂಡಿಬಂದಿದೆ’ ಎಂದು ಹೇಳಿದರು. 

ರಾಮಾಯಣದ ಪುಸ್ತಕ ಪ್ರತಿ ಮನೆಯಲ್ಲೂ ಇರಬೇಕು, ಮುಂದಿನ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲೂ ಲಭ್ಯವಾಗಬೇಕು ಎಂದು ರಾಮಚಂದ್ರಾಪುರ ಮಂಡಲ ದಿಗ್ದರ್ಷಕರಾದ ಭಾಗಿ ಸತ್ಯನಾರಾಯಣ ಹೇಳಿದರು.

ಪ್ರಧಾನ ಮಠದ ನಿರ್ವಹಣಾ ಸಮಿತಿ ಅಧ್ಯಕ್ಷ ಸೀತಾರಾಮ್ ಭಟ್, ಉದ್ಯಮಿ ಪ್ರಭಾಕರ ರಾವ್ ಕಾರ್ಗಡಿ, ಪತ್ರಕರ್ತ ವಸಂತ ನೀಚಡಿ, ಮಂಡಲ ಅಧ್ಯಕ್ಷ ಬೇರಾಳ ಪ್ರಕಾಶ್, ಕಾರ್ಯದರ್ಶಿ ಕೆ.ಎಲ್. ರಮೇಶ್ ಕಾನುಗೋಡು ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT