ಹೊಸನಗರ: 30ಕ್ಕೂ ಹೆಚ್ಚು ಕೋಣಗಳನ್ನು ತುಂಬಿ ಅಕ್ರಮ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಹುಲಿಕಲ್ ಘಾಟ್ ಬಳಿಯ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಹುಲಿಕಲ್ ಘಾಟ್ ಬಳಿ ಭಾನುವಾರ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸಿಬ್ಬಂದಿ ವೇಗವಾಗಿ ಬರುತ್ತಿದ್ದ ದೊಡ್ಡ ಲಾರಿಯಲ್ಲಿಯನ್ನು ತಡೆದು ನಿಲ್ಲಿಸಿದಾಗ ಅದರಲ್ಲಿ ಕೋಣಗಳು ಇರುವುದು ಪತ್ತೆಯಾಗಿದೆ.
ಕೋಣಗಳ ಕಾಲು ಕಟ್ಟಿ ಬೇಕಾಬಿಟ್ಟಿಯಾಗಿ ತುಂಬಲಾಗಿತ್ತು. ಕೋಣಗಳನ್ನು ತುಂಬಿದ ಲಾರಿಯು ಶಿವಮೊಗ್ಗ ಕಡೆಯಿಂದ ಹುಲಿಕಲ್ ಮಾರ್ಗವಾಗಿ ಉಡುಪಿ– ಮಂಗಳೂರು ಕಡೆಗೆ ಸಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಚಾಲಕ ಹಾಗೂ ವಾಹನವನ್ನು ವಶಕ್ಕೆ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.