ಮಂಗಳವಾರ, ಸೆಪ್ಟೆಂಬರ್ 28, 2021
22 °C

ತೀರ್ಥಹಳ್ಳಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮಲತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಲತಂದೆ ಹಾಗೂ ನೆರೆ ಮನೆಯ ಪುರುಷ 12 ವರ್ಷದ  ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೊದಲ ಪತ್ನಿ ತ್ಯಜಿಸಿದ್ದ 36 ವರ್ಷದ ಆರೋಪಿ ಬಯಲು ಸೀಮೆಗೆ ಕೂಲಿ ಕೆಲಸಕ್ಕೆ ಹೋದಾಗ ವಿಧವೆಯೊಬ್ಬರ ಪರಿಚಯವಾಗಿದೆ. ಒಬ್ಬ ಮಗಳ ತಾಯಿಯಾಗಿದ್ದ ಅವರನ್ನು ಮದುವೆಯಾಗಿ ಸ್ವಗ್ರಾಮದಲ್ಲೇ ನೆಲೆಸಿದ್ದ. ಪತ್ನಿ ಕೆಲಸಕ್ಕೆ ಹೋದಾಗ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಬ್ಬರೂ ಕೆಲಸಕ್ಕೆ ಹೋದಾಗ ನೆರೆ ಮನೆಯ ವ್ಯಕ್ತಿ (43) ಅತ್ಯಾಚಾರ ಮಾಡಿದ್ದಾನೆ. 

ಶಾಲೆ ಆರಂಭದ ನಂತರ ಮಂಕಾಗಿದ್ದ ಬಾಲಕಿಯನ್ನು ಶಿಕ್ಷಕರು ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಾಳೂರು ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು