ಸಾಗರ: ತಾಲ್ಲೂಕಿನ ಆನಂದಪುರ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಹೋಬಳಿಯ ನಾಗರಿಕರು ಮಾರ್ಚ್ 15 ರಂದು ಸಂಜೆ 4ಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನಾಗರಿಕ ಸನ್ಮಾನ ನೀಡಲಿದ್ದಾರೆ.

ರಾಜಕಾರಣದಲ್ಲಿ ದೀರ್ಘಕಾಲ ಕಾಗೋಡು ತಿಮ್ಮಪ್ಪ ಅವರು ಸಲ್ಲಿಸಿದ ಸೇವೆ, ಒಂದೇ ದಿನ ಕುವೆಂಪು ಹಾಗೂ ಇರುವಕ್ಕಿ ಕೃಷಿ ತೋಟಗಾರಿಕೆ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಹಿನ್ನಲೆಯಲ್ಲಿ ಅವರಿಗೆ ಈ ಸನ್ಮಾನ ಏರ್ಪಡಿಸಲಾಗಿದೆ ಎಂದು ಸನ್ಮಾನ ಸಮಿತಿ ಕಾರ್ಯಾಧ್ಯಕ್ಷ ಸೋಮಶೇಖರ ಲ್ಯಾವಿಗೆರೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಚಿವರಾದ ಮಧು ಬಂಗಾರಪ್ಪ, ಸಂತೋಷ್ ಲಾಡ್, ಶಾಸಕ ಗೋಪಾಲಕೃಷ್ಣ ಬೇಳೂರು, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಪ್ರಮುಖರಾದ ಬಿ.ಆರ್.ಜಯಂತ್, ಸುಧೀರ್ ಕುಮಾರ್ ಮುರೊಳ್ಳಿ ಮೊದಲಾದವರು ಪಾಲ್ಗೊಳ್ಳುತ್ತಿದ್ದು, ಹಿರಿಯರಾದ ಬಿ.ಟಾಕಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಅಂದು ಸಂಜೆ 6 ಕ್ಕೆ ಗಾಯಕಿ ಸಾಧ್ವಿನಿ ಕೊಪ್ಪ ಮತ್ತು ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಪ್ರಮುಖರಾದ ಬಿ.ಟಾಕಪ್ಪ, ಚೇತನ್ ರಾಜ್ ಕಣ್ಣೂರು, ಉಮೇಶ್ ಎನ್. ಗಜೇಂದ್ರ, ಕಿರಣ್ ದೊಡ್ಮನೆ, ಈಶ್ವರ, ಅಶ್ವಿನಿಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.