ಶನಿವಾರ, ಸೆಪ್ಟೆಂಬರ್ 18, 2021
24 °C

ಶಿವಮೊಗ್ಗ: ವಡ್ಡಿನಬೈಲು ಮಾರ್ಗದ ಧರೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಹೊದಲ ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಸರ ತಿರುವಿನ ವಡ್ಡಿನಬೈಲು ಬಳಿ ಧರೆ ಕುಸಿದಿದೆ. ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ.

ಜುಲೈ 23, 24ರಂದು ಸುರಿದ ಭಾರಿ ಮಳೆಗೆ ಧರೆ ಕುಸಿದಿತ್ತು. ಈಗ ಪ್ರತಿದಿನ ಸ್ವಲ್ಪ ಸ್ವಲ್ಪವೇ ಕುಸಿಯುತ್ತಿದ್ದು, ಒಂದೆರಡು ಅಡಿ ಕುಸಿದರೆ ತೀರ್ಥಹಳ್ಳಿ–ಕೋಣಂದೂರು ಸಂಪರ್ಕದ ಮಾರ್ಗದಲ್ಲಿನ ಕೊಪ್ಪಲು, ಹೊದಲ ಅರಳಾಪುರ, ವಡ್ಡಿನಬೈಲು, ತುಪ್ಪದ ಮನೆ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳಲಿದೆ. ಕುಸಿತದ ಅಪಾಯದ ಮಧ್ಯೆಯೂ ಭಾರ ತುಂಬಿದ ವಾಹನಗಳು ಸಂಚರಿಸುತ್ತಿವೆ. 

ತುಂತುರು ಮಳೆ: ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ ಕೆಲವೆಡೆ ತುಂತುರು ಮಳೆಯಾಗಿದೆ. ಹೊಸನಗರದಲ್ಲಿ 18.4 ಮಿ.ಮೀ., ಭದ್ರಾವತಿಯಲ್ಲಿ 1.2 ಮಿ.ಮೀ. ಮಳೆಯಾಗಿದ್ದು, ಉಳಿದೆಡೆ ಬಿಡುವು ನೀಡಿತ್ತು.

ಬಿರುಸಿನ ಮಳೆ: ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಶನಿವಾರ ಬಿರುಸಿನ ಮಳೆಯಾಗಿದೆ. ಶುಕ್ರವಾರ ರಾತ್ರಿಯೂ ಧಾರಾಕಾರ ಮಳೆ ಸುರಿದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು