ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 24 ಸೋಂಕಿತರು: ಶಿವಮೊಗ್ಗದ ಮಹಿಳೆ ಸಾವು

ಶಿವಮೊಗ್ಗ, ಶಿಕಾರಿಪುರ ತಾಲ್ಲೂಕಿನಲ್ಲಿ ಕೋವಿಡ್‌ ರೋಗಿಗಳ ಪ್ರಮಾಣ ಹೆಚ್ಚಳ
Last Updated 6 ಜುಲೈ 2020, 16:47 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ಸೋಂಕಿಗೆ ಒಳಗಾದ ಇಲ್ಲಿನ ಸೀಗೆಹಟ್ಟಿಯ 68 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 5ಕ್ಕೇರಿದೆ.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿಯೇ ಅವರು ಮೃತಪಟ್ಟಿದ್ದಾರೆ. ಗಂಟಲು ದ್ರವ ಪರೀಕ್ಷೆಯಿಂದ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಜಿಲ್ಲೆಯ 24 ಜನರಲ್ಲಿಸೋಮವಾರ ಸೋಂಕುಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 285ಕ್ಕೆ ಏರಿಕೆಯಾಗಿದೆ. ಸೋಮವಾರ 8 ಜನರು ಸೇರಿದಂತೆ 125 ಮಂದಿ ಗುಣಮುಖರಾಗಿದ್ದಾರೆ. 156 ಜನರು ಕೋಚಿಡ್‌ ಆರೈಕೆ ಕೇಂದ್ರದಲ್ಲಿ ಚಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರದ ಸೋಂಕಿತರಲ್ಲಿ ಶಿವಮೊಗ್ಗದ 14, ಶಿಕಾರಿಪುರದ 8, ಹೊಸನಗರ, ಸಾಗರದ ತಲಾ ಒಬ್ಬರು ಇದ್ದಾರೆ.

24ರಲ್ಲಿ13 ಮಂದಿಗೆ ಕೊರೊನಾ ಸೋಂಕಿತರ ಪ್ರಥಮ ಸಂಪರ್ಕದಿಂದ ವೈರಸ್‌ ತಗುಲಿದೆ. ಪಿ–16647 ರೋಗಿಯ ಸಂಪರ್ಕದಿಂದ57 ವರ್ಷದ ಪುರುಷ (ಪಿ–23598)ನಿಗೆ,ಪಿ–19757 ರೋಗಿಯ ಸಂಪರ್ಕದಿಂದ68 ವರ್ಷದ ಮಹಿಳೆ (ಪಿ–23599),11 ತಿಂಗಳ ಬಾಲಕಿ (ಪಿ–23600), 33 ವರ್ಷದ ಮಹಿಳೆ (ಪಿ–23601), ಪಿ–19759ರೋಗಿಯ ಪ್ರಥಮ ಸಂಪರ್ಕದಿಂದ64 ವರ್ಷದ ಮಹಿಳೆ (ಪಿ–23602), 54 ವರ್ಷದ ಪುರುಷ (ಪಿ–23603),ಪಿ–19787 ರೋಗಿಯಿಂದ 40 ವರ್ಷದ ಮಹಿಳೆ (ಪಿ–23616) ವೈರಸ್‌ ತಗುಲಿದೆ.

ಪಿ–9546ರೋಗಿಯ ಸಂಪರ್ಕದಿಂದಲೇ ಒಟ್ಟು 7 ಮಂದಿಗೆ ಸೋಂಕು ಹರಡಿದೆ.53 ವರ್ಷದ ಪರುಷ (ಪಿ–23604), 60 ವರ್ಷದ ಪುರುಷ (ಪಿ–23605),65 ವರ್ಷದ ಪುರುಷ (ಪಿ–23606),28 ವರ್ಷದಯುವಕ(ಪಿ–23607), 25 ವರ್ಷದ ಯುವಕ (ಪಿ–23608), 48 ವರ್ಷದ ಪುರುಷ (ಪಿ–23609), 50 ವರ್ಷದ ಪುರುಷ (ಪಿ–23610)ರು ಸೋಂಕಿಗೆ ಒಳಗಾಗಿದ್ದಾರೆ.

ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿದ್ದ 7 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇವರಿಗೆಹೊರಗಿನ ಪ್ರಯಾಣ ಮಾಡಿದ ದಾಖಲೆ ಇಲ್ಲ.31 ವರ್ಷದ ಪುರುಷ (ಪಿ–23611), 60 ವರ್ಷದ ಪುರುಷ (ಪಿ–23612), 90 ವರ್ಷದ ವೃದ್ಧೆ (ಪಿ–23613), 45 ವರ್ಷದ ಪುರುಷ (ಪಿ–23614), 39 ವರ್ಷದ ಪುರುಷ (ಪಿ–23615), 55 ವರ್ಷದ ಮಹಿಳೆ (ಪಿ–23617), 23 ವರ್ಷದಯುವಕ (ಪಿ–23619)ತೀವ್ರ ಉಇಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

‌ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಬಂದಿದ್ದ27 ವರ್ಷದ ಮಹಿಳೆ (ಪಿ–23618)ಯಲ್ಲಿ ಜ್ವರ ಕಾಣಿಸಿಕೊಂಡಿತ್ತು. ಉಡುಪಿಯಿಂದ ಬಂದಿದ್ದ 22 ವರ್ಷದ ಯುವಕ (ಪಿ–23620)ನಿಗೂ ಶೀತ, ಕೆಮ್ಮು ಗಂಟಲು ನೋವು ಇತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ಖಚಿತವಾಗಿದೆ.22 ವರ್ಷದ ಪುರುಷ (ಪಿ–23621)ನಿಗೆ ಸೋಂಕು ಹರಡಿದ ಮೂಲ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT