ಶುಕ್ರವಾರ, ಜೂನ್ 18, 2021
25 °C
4,543ಕ್ಕೆ ಏರಿದ ಸೋಂಕಿರ ಸಂಖ್ಯೆ, ನಗರದಲ್ಲೇ ಹೆಚ್ಚು, ನಾಲ್ವರ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ 211 ಜನರು ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: 20 ದಿನದ ನವಜಾತು ಶಿಶು ಸೇರಿ ಜಿಲ್ಲೆಯಲ್ಲಿ 236 ಮಂದಿಗೆ ಕೊರೊನಾ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ. ನಾಲ್ವರು ಮೃತಪಟ್ಟಿದ್ದಾರೆ. 211 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ನಗರದಲ್ಲೇ 96 ಜನರಿಗೆ ಸೋಂಕು ತಗುಲಿದೆ. ಭದ್ರಾವತಿಯಲ್ಲಿ 39, ಶಿಕಾರಿಪುರದಲ್ಲಿ 69,  ತೀರ್ಥಹಳ್ಳಿಯಲ್ಲಿ 10, ಹೊಸನಗರ 4, ಸೊರಬ 2, ಸಾಗರ 8 ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ಹೊರಜಿಲ್ಲೆಯ 8 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.

ಒಟ್ಟು ಸೋಂಕಿತರ ಸಂಖ್ಯೆ 4,543ಕ್ಕೆ ಏರಿದೆ. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದ 211 ಜನರೂ ಸೇರಿ ಇದುವರೆಗೆ 2,828 ಮಂದಿ ಗುಣಮುಖರಾಗಿದ್ದಾರೆ. ಮನೆಗಳಲ್ಲಿ 260, ಖಾಸಗಿ ಆಸ್ಪತ್ರೆಗಳಲ್ಲಿ 256 ಸೇರಿ ಒಟ್ಟು 1,638 ಜನ ವಿವಿಧ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 77 ಜನ ಮೃತಪಟ್ಟಿದ್ದಾರೆ.

69 ಮಂದಿಗೆ ಸೋಂಕು (ಶಿಕಾರಿಪುರ ವರದಿ):

ತಾಲ್ಲೂಕಿನಲ್ಲಿ 69 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ.

ಪಟ್ಟಣದ ಜಯನಗರ, ಮುದಿಗೌಡ್ರುಕೇರಿ, ಹಳೇಸಂತೆಮೈದಾನ ರಸ್ತೆ, ಕುಂಬಾರಗುಂಡಿ, ಖಾಜಿಕೊಪ್ಪಲು, ಚನ್ನಕೇಶವ ನಗರ ಮೃತ ಮಹಿಳೆ, ಶಿರಾಳಕೊಪ್ಪ ಪಟ್ಟಣ, ತಾಲ್ಲೂಕಿನ ಉಡುಗಣಿ ಗ್ರಾಮ,ತರಲಘಟ್ಟ ಕ್ಯಾಂಪ್, ಹುಲುಗಿನಕೊಪ್ಪ, ಅಂಬ್ಲಿಗೊಳ್ಳ, ಬೋಗಿ, ಅಡಗಂಟಿ, ಚೌಡನಾಯಕನಕೊಪ್ಪ, ಹೊಸಮುತ್ತಿಗೆ, ಸಿದ್ದಿಹಳ್ಳಿ, ಹಳೇಗೊದ್ದನಕೊಪ್ಪ, ಸಾಲೂರು, ಅಮಟೆಕೊಪ್ಪ, ಹೊಸಗುಳೇದಳ್ಳಿ, ಹೋತನಕಟ್ಟೆ, ಹೊಸಗೊದ್ದನಕೊಪ್ಪ,ಬಳ್ಳಿಗಾವಿ, ಬಸವನಂದಿಹಳ್ಳಿ, ಜಾವಗಟ್ಟಿ,
ಹಕ್ಕಿಪಿಕ್ಕಿ ಕ್ಯಾಂಪ್ ಎಂಸಿಆರ್ ಪಿ ಕಾಲೋನಿ, ಮತ್ತಿಕೋಟೆ ಗ್ರಾಮದ ನಿವಾಸಿಗಳಿಗೆ ಕೊರೊನಾ ಸೋಂಕುತಗುಲಿದೆ.

39 ಮಂದಿಗೆ ಕೊರೊನಾ (ಭದ್ರಾವತಿ ವರದಿ):

ತಾಲ್ಲೂಕಿನಲ್ಲಿ 39 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ನಗರದ ನೆಹರು ನಗರದಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.   ಎಂಎಂ ಕಾಂಪೌಂಡ್, ಹೊಸ ಮನೆ ಗಣಪತಿ ದೇವಾಲಯ, ಕಣಕಟ್ಟೆ, ಹನುಮಂತಪ್ಪ ಕಾಲೋನಿ, ಬೆಣ್ಣೆಕ್ರಷ್ಣ ಸರ್ಕಲ್, ಸಿದ್ದಾರ್ಥ ಅಂಧರ ಕೇಂದ್ರದ ಬಳಿ, ಕಾಗದನಗರ ೬ನೇ ವಾರ್ಡ್, ಹಳೇಜೇಡಿಕಟ್ಟೆ ಚರ್ಚ್‌ ಬಳಿ, ನ್ಯೂಕಾಲೊನಿಯಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ನವಜಾತ ಶಿಶುವಿಗೂ ಸೋಂಕು (ಸಾಗರ ವರದಿ):

ನವಜಾತ ಶಿಶು ಸೇರಿ ತಾಲ್ಲೂಕಿನಲ್ಲಿ ಎಂಟು ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ರಾಮನಗರ ಬಡಾವಣೆಯಲ್ಲಿ 20 ದಿನದ ಶಿಶು, 28 ವರ್ಷದ ಮಹಿಳೆ, ಬೆಳಲಮಕ್ಕಿಯಲ್ಲಿ 26 ವರ್ಷದ ಪುರುಷ, ಅಶೋಕ ರಸ್ತೆಯಲ್ಲಿ 79 ವರ್ಷದ ವೃದ್ದೆಗೆ ಪಾಸಿಟಿವ್ ಬಂದಿದೆ. ಆನಂದಪುರಂನಲ್ಲಿ ಮೂವರು ಮಹಿಳೆಯರು, ಓರ್ವ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.

ವ್ಯಕ್ತಿ ಸಾವು (ರಿಪ್ಪನ್ ಪೇಟೆ ವರದಿ):

ತಾಲ್ಲೂಕಿನ ಗವಟೂರು ಗ್ರಾಮದ 35 ವರ್ಷದ ಕೊರೊನಾ ಶಂಕಿತ ವ್ಯಕ್ತಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ವಿದ್ಯಾನಗರ ನಿವಾಸಿ ಅಂಗನವಾಡಿ ಕಾರ್ಯಕರ್ತೆ (33) ಹಾಗೂ ತೀರ್ಥಹಳ್ಳಿರಸ್ತೆಯ ನಿವಾಸಿ (20) ವರ್ಷದ ಯುವಕನಿಗೆ ಸೋಂಕು ಇರುವುದು  ದೃಢಪಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು