ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕೋವಿಡ್‌ನಿಂದ ಗಾಂಧಿ ಬಜಾರ್ ಕಾಯಿ ವ್ಯಾಪಾರಿ ಸಾವು

ಒಂದೇ ದಿನ 6 ಜನರಿಗೆ ಸೋಂಕು, ಸುಳ್ಳು ಸುದ್ದಿ ಹಬ್ಬಿಸಿದ ಮೂವರ ವಿರುದ್ಧ ಪ್ರಕರಣ ದಾಖಲು
Last Updated 10 ಜುಲೈ 2020, 15:24 IST
ಅಕ್ಷರ ಗಾತ್ರ

ಶಿವಮೊಗ್ಗ: ಗಾಂಧಿ ಬಜಾರ್‌ ಕಸ್ತೂರ ಬಾ ರಸ್ತೆಯ 62 ವರ್ಷದ ಪುರುಷ ಕೋವಿಡ್‌ ರೋಗಿ ಶುಕ್ರವಾರ ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದೆ ಅದೇ ಪ್ರದೇಶದ ರವಿವರ್ಮ ಬೀದಿಯ 70 ವರ್ಷದ ವೃದ್ಧರೊಬ್ಬರು ಕೋವಿಡ್‌ನಿಂದ ಸಾವು ಕಂಡಿದ್ದರು.

ಗಾಂಧಿ ಬಜಾರ್‌ನಲ್ಲಿ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದ ಅವರಿಗೆಕೆಲವು ದಿನಗಳ ಹಿಂದೆ ಶೀತ,ಜ್ವರದಿಂದ ಕಾಣಿಸಿಕೊಂಡಿತ್ತು.ತಕ್ಷಣ ಅವರನ್ನುಮೆಗ್ಗಾನ್‌ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಜಿಲ್ಲೆಯಲ್ಲಿ ಶುಕ್ರವಾರ 6 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 378ಕ್ಕೇರಿದೆ. ಶುಕ್ರವಾರ 28 ಮಂದಿ ಸೇರಿದಂತೆ ಇದುವರೆಗೂ 169 ಜನರು ಗುಣಮುಖರಾಗಿದ್ದಾರೆ. 205 ಜನರು ಕೋವಿಡ್‌ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರಿಗೆ ಸೋಂಕು ತಗುಲಿದ ಮೂಲವೇ ಪತ್ತೆಯಾಗಿಲ್ಲ.26 ವರ್ಷದ ಮಹಿಳೆ (ಪಿ–31737)38 ವರ್ಷದ ಪುರುಷ (ಪಿ–31912),5 ವರ್ಷದ ಬಾಲಕ (ಪಿ–31753),32 ವರ್ಷದ ಮಹಿಳೆ (ಪಿ–31921) ಆರೋಗ್ಯ ಸಮಸ್ಯೆಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸೋಂಕು ತಗುಲಿದ ಮಾಹಿತಿ ಕಲೆ ಹಾಕಲಾಗುತ್ತಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ21 ವರ್ಷದ ಯುವಕ (ಪಿ–31930), 46 ವರ್ಷದ ಮಹಿಳೆಯಲ್ಲಿ (ಪಿ–31943) ಸೋಂಕು ಇರುವುದು ದೃಢಪಟ್ಟಿದೆ.

ಕೊರೊನಾ ಸೋಂಕಿತ ವ್ಯಕ್ತಿಗಳು ಇರುವ ಗಾಂಧಿ ಬಜಾರ್ ಕಸ್ತೂರ ಬಾ ರಸ್ತೆ, ನೇತಾಜಿ ಸರ್ಕಲ್ ಹತ್ತಿರ, ಕೆ.ಎಚ್.ಬಿ ಕಾಲೊನಿ, ಗೋಪಾಳ, ತ್ಯಾವರೆ ಚಟ್ನಹಳ್ಳಿ, ಗೋಪಾಳಗೌಡ ಬಡಾವಣೆ ಇಬ್ಲಾಕ್ 2 ಕ್ರಾಸ್, ಹಾಯ್‌ಹೊಳೆ ರಸ್ತೆ, ಪೇಪರ್ ಫ್ಯಾಕ್ಟರಿ ಪ್ರದೇಶಗಳನ್ನುಸೀಲ್‌ಡೌನ್‌ ಮಾಡಲಾಗಿದೆ.

ಕ್ವಾರಂಟೈನ್‌ ಉಲ್ಲಂಘಿಸಿದ ಮೂವರ ವಿರುದ್ಧಪ್ರಕರಣ

ಶಿವಮೊಗ್ಗ:ಉದ್ದೇಶಪೂರ್ವಕವಾಗಿಕ್ವಾರಂಟೈನ್‌ ಆದೇಶ ಉಲ್ಲಂಘಿಸಿದ ಜಿಲ್ಲೆಯ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಹೊರರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ ವ್ಯಕ್ತಿಗಳು ಹೋಂ ಕ್ವಾರಂಟೈನ್‌ ಇರಲು ಆದೇಶವಿದೆ. ಕೆಲವರು ಉದ್ದೇಶಪೂರ್ವಕವಾಗಿ ಆದೇಶ ಉಲ್ಲಂಘಿಸಿದ್ದಾರೆ.ತುಂಗಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಹಾಗೂ ಸಾಗರ ತಾಲ್ಲೂಕಿನಲ್ಲಿ ಒಬ್ಬ ವ್ಯಕ್ತಿ ಮೇಲೆ ಪ್ರಕರಣ ದಾಖಲಾಗಿದೆಎಂದು ಜಿಲ್ಲಾ ಪೊಲೀಸ್‌ವರದಿಷ್ಠಾಧಿಕಾರಿ ಮಾಹಿತಿ ನೀಡಿದರು.

ಸುಳ್ಳು ಸುದ್ದಿ, ದೂರು ದಾಖಲು (ಹೊಳೆಹೊನ್ನೂರು):ಕೋವಿಡ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಇಲಾಖೆ ಅಧಿಕಾರಿ,ಕೊರೊನಾ ವಾರಿಯರ್ಸ್‌ಗಳಿಂದ ಗ್ರಾಮದಲ್ಲಿ ಕೊರಾನಾ ಹಬ್ಬಿದೆ ಎಂದು ಸುಳ್ಳು ಸುದ್ದಿ ಹರಡಿದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಹನುಮಂತಾಪುರದ ಆರೋಗ್ಯ ಅಧಿಕಾರಿರುದ್ರೇಶ್ ಹಾಗೂ ಅವರ ಕುಟುಂಬದವರಿಗೆ ಕೊರೊನಾ ಬಂದಿದೆ ಎಂದು ಸುಳ್ಳು ಸುದ್ದಿ ಹರಡಿದ್ದರರು.ಈ ಕುರಿತುರುದ್ರೇಶ್ ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು. ಈ ಸಂಬಂಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೊಳೆಹನ್ನೂರು ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT