ಗುರುವಾರ , ಜೂನ್ 24, 2021
28 °C

ನಾಲೆಯಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಇಲ್ಲಿನ ಹಾಯ್‌ಹೊಳೆ ಸಮೀಪ ತುಂಗಾ ನದಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಪಾಲಿಕೆ ಸದಸ್ಯೆ ಆರತಿ ಪ್ರಕಾಶ್‌ ಅವರ ಪುತ್ರ ಪ್ರತೀಶ್ (24) ಶವವಾಗಿ ಶನಿವಾರ ಪತ್ತೆಯಾಗಿದ್ದಾನೆ. 

ಪ್ರತೀಶ್‌ ಸ್ನೇಹಿತರೊಂದಿಗೆ ಶುಕ್ರವಾರ ಹುಟ್ಟುಹಬ್ಬ ಆಚರಿಸಲು ತುಂಗಾ ನದಿ ಚಾನಲ್ ಬಳಿ ತೆರಳಿದ್ದರು. ಆಗ ಆಯತಪ್ಪಿ ಚಾನಲ್‌ಗೆ ಬಿದ್ದು ಕೊಚ್ಚಿ ಹೋಗಿದ್ದರು.

ಅಗ್ನಿಶಾಮಕ ತಂಡ, ವಿಪತ್ತು ನಿರ್ವಹಣಾ ತಂಡದಿಂದ ಶೋಧ ಕಾರ್ಯ ನಡೆದಿತ್ತು. ಶನಿವಾರ ‌ಚಾನಲ್‌ನಲ್ಲಿ ಪ್ರತೀಶ್ ಮೃತದೇಹ ಪತ್ತೆಯಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.