ಶಿವಮೊಗ್ಗ: ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ವಾರ್ಷಿಕ ಶೇ 3ರ ಬಡ್ಡಿ ದರದಲ್ಲಿ ಹೈನುಗಾರರಿಗೆ ಸಾಲ ನೀಡಲಿದೆ. ಯುನಿಟ್ ಒಂದಕ್ಕೆ ₹ 80 ಸಾವಿರದಂತೆ ಒಬ್ಬರಿಗೆ ಗರಿಷ್ಠ ಎರಡು ಯುನಿಟ್ಗಳಿಗೆ ಸಾಲ ಕೊಡಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.

ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಾಲದ ಹಣದಲ್ಲಿ ಫಲಾನುಭವಿ ಎಮ್ಮೆ, ಆಕಳು ಖರೀದಿ ಮಾಡಬಹುದು. ಆ ರಾಸುಗಳಿಗೆ ಮೇವು ಬೆಳೆಯಲು ಫಲಾನುಭವಿಗಳಿಗೆ ವರ್ಷಕ್ಕೆ ₹ 18 ಸಾವಿರ ಬಡ್ಡಿ ರಹಿತ ಸಾಲ ನೀಡಲಾಗುವುದು. ಇದಕ್ಕೆ ಶಿಮುಲ್ ಆರ್ಥಿಕ ನೆರವು ನೀಡಲಿದೆ. ಸಾಲ ಪಡೆಯುವ ರೈತರ ಸಂಖ್ಯೆಗೆ ಯಾವುದೇ ಮಿತಿ ಇಲ್ಲ. ಜಿಲ್ಲೆಯ ಹಾಲು ಉತ್ಪಾದಕರು ಈ ಅವಕಾಶ ಬಳಸಿಕೊಳ್ಳಲಿ’ ಎಂದರು.

ಜಿಲ್ಲೆಯಲ್ಲಿ ಒಟ್ಟು 13,095 ಹೈನುಗಾರರನ್ನೊಳಗೊಂಡ 542 ಹಾಲು ಉತ್ಪಾದಕರ ಸಹಕಾರ ಸಂಘಗಳ ಖಾತೆಯನ್ನು ಡಿಸಿಸಿ ಬ್ಯಾಂಕ್ನಲ್ಲಿ ತೆರೆಯಲಾಗಿದೆ. ಐದು ಶಾಖೆಗಳು ಜಿಲ್ಲೆಯ ಎಲ್ಲ ಹೋಬಳಿ ಹಾಗೂ ದೊಡ್ಡ ಗ್ರಾಮಗಳಿಗೆ ಮನೆಯಲ್ಲಿ ಕುಳಿತು ವ್ಯವಹಾರ ಮಾಡಲು ಯುಪಿಐ ಸೇವೆ ಆರಂಭಿಸಲಾಗುವುದು. ಇದರಿಂದ ರೈತರ ಸಮಯ ಉಳಿತಾಯವಾಗಲಿದೆ ಎಂದರು.

ರಾಜ್ಯ ಅಪೆಕ್ಸ್ ಬ್ಯಾಂಕ್ನ ‘ಎ’ ದರ್ಜೆ ವರ್ಗೀಕರಣದಲ್ಲಿ ಸತತ ಎರಡು ವರ್ಷಗಳಿಂದ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಮೊದಲ ಸ್ಥಾನ ಪಡೆದಿದೆ. ಕಳೆದ ಹಣಕಾಸು ವರ್ಷದಲ್ಲಿ ₹ 36.75 ಕೋಟಿ ನಿವ್ವಳ ಲಾಭ ಗಳಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ₹ 45 ಕೋಟಿ ಲಾಭ ಗಳಿಸುವ ಉದ್ದೇಶ ಹೊಂದಿದೆ. 2024–25ನೇ ಸಾಲಿನ ಅಂತ್ಯಕ್ಕೆ ಬ್ಯಾಂಕ್ ₹ 1,600 ಕೋಟಿ ಠೇವಣಿ ಸಂಗ್ರಹ ಹೊಂದಿದ್ದು, ದುಡಿಯುವ ಬಂಡವಾಳ ₹ 2,582 ಕೋಟಿ ಸೇರಿದಂತೆ ಅಅಂದಾಜು ₹ 3,521 ಕೋಟಿ ವ್ಯವಹಾರ ನಡೆಸುತ್ತಿದೆ. ಬೆಂಗಳೂರು ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿರುವ ಬ್ಯಾಂಕ್ ನಬಾರ್ಡ್ನ ಪರಿವೀಕ್ಷಣಾ ವರದಿಯಲ್ಲಿ ‘ಎ’ ದರ್ಜೆ ಪಡೆದಿದೆ ಎಂದು ಹೇಳಿದರು.

ಈ ವರ್ಷ ಬ್ಯಾಂಕ್ನಿಂದ ₹ 1200 ಕೋಟಿ ಬೆಳೆ ಸಾಲ ನೀಡಲಾಗಿದೆ. ಮುಂದಿನ ವರ್ಷ ₹ 1400 ಕೋಟಿ ಸಾಲ ನೀಡುವ ಉದ್ದೇಶ ಹೊಂದಲಾಗಿದೆ. ಸರ್ಕಾರದ ಷೇರು ಧನ ಇಲ್ಲದೇ ನಡೆಯುತ್ತಿರುವ ಬರೀ ರೈತರ ಷೇರು ಹೊಂದಿರುವ ಬ್ಯಾಂಕ್ ಇದಾಗಿದೆ. ಮೊಬೈಲ್ ಬ್ಯಾಂಕಿಂಗ್ ಮತ್ತೊಂದು ವಾಹನ ಶೀಘ್ರದಲ್ಲಿ ಬರಲಿದೆ. ತ್ವರಿತವಾಗಿ ಪೇಪರ್ ಲೆಸ್, ಕ್ಯಾಶ್ಲೆಸ್ ಬ್ಯಾಂಕ್. ಸರ್ಕಾರದ ನೆರವು ಇಲ್ಲದೇ ಕೆಲಸ ಮಾಡುತ್ತಿರುವ ಬ್ಯಾಂಕ್ ಇದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ಮಹಾಲಿಂಗಶಾಸ್ತ್ರಿ, ಜಿ.ಎನ್. ಸುಧೀರ್, ಬಸವರಾಜ್, ಕೆ.ಪಿ. ದುಗ್ಗಪ್ಪಗೌಡ, ಚಂದ್ರಶೇಖರ್, ಪರಮೇಶ್ವರ್, ಎಚ್.ಎಸ್. ರವೀಂದ್ರ, ಕೆ.ಪಿ. ರುದ್ರೇಗೌಡ, ಎಂ.ಡಿ. ರಾಜಣ್ಣ ರೆಡ್ಡಿ ಉಪಸ್ಥಿತರಿದ್ದರು.

ಸರ್ಕಾರದ ಹಸ್ತಕ್ಷೇಪವಿಲ್ಲದೇ ನಡೆಯುತ್ತಿರುವ ಏಕೈಕ ಡಿಸಿಸಿ ಬ್ಯಾಂಕ್ ನಮ್ಮದು. 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿದ ಶ್ರೇಯ ಬ್ಯಾಂಕ್ನದ್ದು. ಅಪೆಕ್ಸ್ ಬ್ಯಾಂಕ್ ಕೂಡ ಶಿಫಾರಸು ಜಾರಿ ಮಾಡಿಲ್ಲ
ಆರ್.ಎಂ.ಮಂಜುನಾಥಗೌಡ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ

10 ಸಂಘಗಳಿಗೆ ತಲಾ ₹ 10 ಸಾವಿರ ಬಹುಮಾನ

ಸೆ.10ರಂದು ಶಿವಮೊಗ್ಗದ ಬ್ಯಾಂಕ್ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಬ್ಯಾಂಕಿನ 68ನೇ ವಾರ್ಷಿಕ ಮಹಾಸಭೆ ಕರೆಯಲಾಗಿದೆ. ಈ ವೇಳೆ ಉತ್ತಮವಾಗಿ ಕೆಲಸ ಮಾಡುತ್ತಿರುವ 10 ಸಹಕಾರಿ ಸಂಘಗಳಿಗೆ ತಲಾ ₹ 10 ಸಾವಿರ ಪ್ರೋತ್ಸಾಹಧನ ನೀಡಲಾಗುವುದು ಎಂದು ಆರ್.ಎಂ. ಮಂಜುನಾಥಗೌಡ ತಿಳಿಸಿದರು. ಶಿವಮೊಗ್ಗ ತಾಲ್ಲೂಕಿನ ಗಾಜನೂರು ತಮ್ಮಡಿಹಳ್ಳಿ ಭದ್ರಾವತಿ ಕಲ್ಲಿಕಟ್ಟೆ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಸಾಗರ ತಾಲ್ಲೂಕಿನ ಆವಿನಹಳ್ಳಿ ಖಂಡಿಕಾ ಶಿಕಾರಿಪುರ ತಾಲ್ಲೂಕಿನ ಮಲ್ಲೇನಹಳ್ಳಿ ಹೊಸನಗರ ತಾಲ್ಲೂಕಿನ ಪುರಪ್ಪೆಮನೆ ತೀರ್ಥಹಳ್ಳಿ ತಾಲ್ಲೂಕಿನ ಮಾಗರವಳ್ಳಿ ಮಂಡಗದ್ದೆ ಪ್ರಾಥಮಿಕ ಸಹಕಾರ ಸಂಘಗಳಿಗೆ ಸನ್ಮಾನ ಮಾಡಲಾಗುವುದು. ಇವರೊಟ್ಟಿಗೆ ಮಹಿಳಾ ವಿವಿಧೋದ್ದೇಶ ವ್ಯವಸಾಯ ಪತ್ತಿನ ಸೇವಾ ಸಂಘ ಹಾಲು ಉತ್ಪಾದಕರ ಸಂಘಗಳಿಗೂ ನೆರವು ನೀಡಲಾಗುವುದು ಎಂದರು.

Cut-off box - ಇಡಿ ದಾಳಿ; ಪ್ರತಿಕ್ರಿಯೆಗೆ ಆರ್ಎಂಎಂ ನಿರಾಕರಣೆ ನಕಲಿ ಚಿನ್ನ ಅಡಮಾನಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಈಚೆಗೆ ನಡೆಸಿದ ದಾಳಿ ಹಾಗೂ ತನಿಖೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ಮಂಜುನಾಥಗೌಡ ನಿರಾಕರಿಸಿದರು. ಬ್ಯಾಂಕಿನ ಕಾರ್ಯಚಟುವಟಿಕೆಗೆ ಬಗ್ಗೆ ಮಾತ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡುವೆ ಎಂದರು. ತಮ್ಮ ರಾಜೀನಾಮೆಗೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದ ಬಗ್ಗೆಯೂ ಪ್ರತಿಕ್ರಿಯೆ ನೀಡದ ಅವರು ಡಿಸಿಸಿ ಬ್ಯಾಂಕ್ ಪಕ್ಷಾತೀತವಾಗಿದೆ. ಇಲ್ಲಿ ಪಕ್ಷ ರಾಜಕಾರಣ ತರುವುದು ಬೇಡ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.